Kannada Duniya

ಮಕ್ಕಳಲ್ಲಿ ಕಾಡುವ ಬೊಜ್ಜಿನ ಸಮಸ್ಯೆ ನಿವಾರಿಸಲು ಈ ಟಿಪ್ಸ್ ಫಾಲೋ ಮಾಡಿ…!

ನಮ್ಮ ಕೆಟ್ಟ ಜೀವನಶೈಲಿ, ಆಹಾರ, ಶಿಕ್ಷಣದ ಒತ್ತಡ, ಆಘಾತ ಇತ್ಯಾದಿಗಳಿಂದ ಹೆಚ್ಚಿನ ಮಕ್ಕಳು ಹದಿಹರೆಯದ ವಯಸ್ಸಿನಲ್ಲಿ ಅಧಿಕ ತೂಕ ಅಥವಾ ಬೊಜ್ಜಿನ ಸಮಸ್ಯೆಗೆ ಒಳಗಾಗುತ್ತಾರೆ. ಸುಮಾರು 70 ಪ್ರತಿಶತದಷ್ಟು ಮಕ್ಕಳು ಈ ಸಮಸ್ಯೆಗೆ ಒಳಗಾಗುತ್ತಾರೆ. ಮಕ್ಕಳನ್ನು ಈ ಸಮಸ್ಯೆಯಿಂದ ಮುಕ್ತಗೊಳಿಸಲು ಪೋಷಕರು ಸರಿಯಾದ ಕಾಳಜಿ ವಹಿಸಬೇಕು.

ಮಕ್ಕಳಲ್ಲಿ ಬೊಜ್ಜಿನ ಸಮಸ್ಯೆ ಹೆಚ್ಚಾದರೆ ಅದರಿಂದ ಅವರಿಗೆ ಹೃದ್ರೋಗಗಳು, ಮಧುಮೇಹ, ಪಾರ್ಶ್ವವಾಯು ಮತ್ತು ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ.

ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಪ್ರೌಢಶಾಲೆಗೆ ಹೋಗುವ ಮಕ್ಕಳು ದಿನವಿಡೀ ಕನಿಷ್ಠ ಒಂದು ಸೋಡಾ ಅಥವಾ ಸಿಹಿಪಾನೀಯವನ್ನು ಕುಡಿಯುತ್ತಾರೆ.ಹಾಗಾಗಿ ಮಕ್ಕಳ ತೂಕ ಹೆಚ್ಚಳ ಸಮಸ್ಯೆಯನ್ನು ನಿವಾರಿಸಲು ಮಕ್ಕಳಿಗೆ ಪೋಷಕಾಂಶಯುಕ್ತ ಆಹಾರ ನೀಡಿ. ಮಕ್ಕಳಿಗೆ ದಿನಕ್ಕೆ ಒಮ್ಮೆ ಆಹಾರ ನೀಡಿ, ಉಳಿದ ಸಮಯದಲ್ಲಿ ಸಾಧ್ಯವಾದಷ್ಟು ಧಾನ್ಯಗಳು, ಹಣ್ಣುಗಳು ಮತ್ತು ತರಕಾರಿಗಳನ್ನು ನೀಡಿ.

ಮನೆಯಲ್ಲೇ ತಯಾರಿಸಿ ರುಚಿ ರುಚಿಯಾದ ಬದನೆಕಾಯಿ ಬಜ್ಜಿ

ಮಕ್ಕಳನ್ನು ಸಕ್ರಿಯರಾಗಿರುವಂತೆ ಮಾಡಿ, ದಿನವಿಡೀ 1 ಗಂಟೆಗಳ ಕಾಲ ದೈಹಿಕ ಚಟುವಟಿಕೆಯಲ್ಲಿ ತೊಡಗಿಕೊಳ್ಳುವಂತೆ ನೋಡಿಕೊಳ್ಳಿ. ಟಿವಿ ವೀಕ್ಷಣೆ ಕಡಿಮೆ ಮಾಡಿಸಿ. ಮಕ್ಕಳಿಗೆ ಬಿಸಿಲು, ಧೂಳು, ಕೊಳಕು, ಬೈಸಿಕಲ್ ರೈಡಿಂಗ್, ಓಟ ಮತ್ತು ಕ್ರೀಡೆಗಳನ್ನು ಆನಂದಿಸಲು ಬಿಡಿ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...