Kannada Duniya

ಬಿಲ್ವ ಫಲವನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಎಷ್ಟೆಲ್ಲಾ ಪ್ರಯೋಜನವಿದೆ ನೋಡಿ….!

ಬಿಲ್ವ ಪತ್ರೆ ಶಿವನಿಗೆ ಬಹಳ ಪ್ರಿಯವಾದದ್ದು. ಬಿಲ್ವಪತ್ರೆ ಇಟ್ಟು ಶಿವನಿಗೆ ಪೂಜೆ ಮಾಡಿದರೆ ಶಿವನ ಕೃಪೆ ದೊರಕುತ್ತದೆ ಎಂದು ಹಿರಿಯರು ಹೇಳುತ್ತಾರೆ. ಶಿವನಿಗೆ ಪ್ರಿಯವಾದ ಈ ಬಿಲ್ವಪತ್ರೆಯ ಮರದ ಹಣ್ಣು ಕೂಡ ಆರೋಗ್ಯಕ್ಕೆ ಬಹಳ ಪ್ರಯೋಜನವನ್ನು ನೀಡಲಿದೆಯಂತೆ. ಇದರಲ್ಲಿರುವ ಔಷಧಿಯ ಅಂಶಗಳಿಂದ ಸಾಕಷ್ಟು ಆರೋಗ್ಯ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದಂತೆ.

ಬಿಲ್ವಮರದ ಎಲೆ, ಕಾಯಿ, ಹಣ್ಣು, ತೊಗಟೆ, ಬೇರು, ಹೂ ಎಲ್ಲವೂ ಔಷಧಿಯ ಗುಣವನ್ನು ಹೊಂದಿದೆ. ಕೆಲವರು ದೇಹದ ಉಷ್ಣತೆಯ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಅಂತಹವರು ಈ ಬಿಲ್ವಫಲದ ತಿರುಳಿನಿಂದ ಜ್ಯೂಸ್ ಮಾಡಿಕೊಂಡು ಸೇವಿಸಿದರೆ ದೇಹದ ಆರೋಗ್ಯಕ್ಕೆ ಬಹಳ ಒಳ್ಳೆಯದು.

ಇನ್ನು ಇದರಲ್ಲಿ ನಾರಿನಂಶ ಹೇರಳವಾಗಿದೆ. ಮಲಬದ್ಧತೆ ಸಮಸ್ಯೆಯಿಂದ ಬಳಲುತ್ತಿರುವವವರು ಬಿಲ್ವ ಫಲವನ್ನುಸೇವಿಸುವುದರಿಂದ ಈ ತೊಂದರೆಯಿಂದ ಹೊರಬರಬಹುದು.ಹಾಗೇ ಇದು ಜೀರ್ಣಕ್ರಿಯೆ ಸಮಸ್ಯೆಯನ್ನು ನಿವಾರಿಸುತ್ತದೆ.

ಕಣ್ಣಿನಲ್ಲಿ ಈ ಲಕ್ಷಣಗಳು ಕಂಡುಬಂದರೆ ಅಪ್ಪಿತಪ್ಪಿಯೂ ನಿರ್ಲಕ್ಷ್ಯ ಮಾಡಬೇಡಿ…!

ಇದರಲ್ಲಿ ಕ್ಯಾಲ್ಸಿಯಂ, ಪೋಟ್ಯಾಷಿಯಂ, ಕಬ್ಬಿಣದ ಅಂಶ, ವಿಟಮಿನ್ ಎ, ವಿಟಮಿನ್ ಸಿ, ನಾರಿನಂಶ ಹೇರಳವಾಗಿದೆ. ಇದು ಹೊಟ್ಟೆಯ ಹುಣ್ಣನ್ನು ಕೂಡ ನಿವಾರಿಸುತ್ತದೆ.

 


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...