Kannada Duniya

ಬಿಗಿಯಾದ ಜೀನ್ಸ್ ಧರಿಸುವುದರಿಂದ ಈ ಗಂಭೀರ ಕಾಯಿಲೆಗಳು ಬರಬಹುದು ಎಚ್ಚರ…!

 

ಹೆಚ್ಚಿನ ಜನರು ಬಿಗಿಯಾದ ಬಟ್ಟೆಗಳನ್ನು ಧರಿಸಲು ಇಷ್ಟಪಡುತ್ತಾರೆ. ಅದರಲ್ಲಿ ಜೀನ್ಸ್ ಕೂಡ ಒಂದು. ವಿಶೇಷವಾಗಿ ಹುಡುಗಿಯರು ಬಿಗಿಯಾದ ಜೀನ್ಸ್ ಧರಿಸುತ್ತಾರೆ. ಯಾಕೆಂದರೆ ಇದರಿಂದ ಅವರ ದೇಹ ಸುಂದರವಾಗಿ ಕಾಣುತ್ತದೆ. ಆದರೆ ಈ ರೀತಿ ಬಿಗಿಯಾದ ಜೀನ್ಸ್ ಅನ್ನು ಧರಿಸಬೇಡಿ. ಇದರಿಂದ ನೀವು ಕೆಲವು ಗಂಭೀರ ಕಾಯಿಲೆಗೆ ಗುರಿಯಾಗಬಹುದು.

ಬಿಗಿಯಾದ ಜೀನ್ಸ್ ಅನ್ನು ಧರಿಸುವುದರಿಂದ ಸ್ನಾಯುಗಳು ಬಿಗಿಗೊಳ್ಳುತ್ತವೆ. ಇದರಿಂದ ರಕ್ತಪರಿಚಲನೆಗೆ ಅಡ್ಡಿಯಾಗಿ ನೋವು, ಊತ , ಗಡ್ಡೆ ಸಮಸ್ಯೆ ಕಾಡುತ್ತದೆ.

ಬಿಗಿಯಾದ ಜೀನ್ಸ್ ಧರಿಸುವುದರಿಂದ ಬೆನ್ನಿನ ಸ್ನಾಯುಗಳ ಮೇಲೆ ಹೆಚ್ಚಿನ ಒತ್ತಡ ಬೀಳುತ್ತದೆ. ಇದು ಬೆನ್ನು ಹುರಿಯ ಮೇಲೂ ಪರಿಣಾಮ ಬೀರುತ್ತದೆ. ಇದರಿಂದ ಬೆನ್ನು ನೋವು ಕಾಣಿಸಿಕೊಳ್ಳುತ್ತದೆ.

ಬಿಗಿಯಾದ ಬಟ್ಟೆಗಳನ್ನು ಧರಿಸುವುದರಿಂದ ಮೂತ್ರನಾಳದಲ್ಲಿ ಸೋಂಕು ಉಂಟಾಗಬಹುದು. ಮೂತ್ರ ಕೋಶ ಕೆಲಸ ಮಾಡಲು ಅಡಚಣೆಯಾಗಬಹುದು. ಮತ್ತು ಫಲವತ್ತತೆಯ ಮೇಲೆ ಪರಿಣಾಮ ಬೀರಬಹುದು. ಇದರಿಂದ ಹೊಟ್ಟೆ ನೋವಿನ ಸಮಸ್ಯೆ ಕೂಡ ಕಾಡಬಹುದು.

ಬಿಗಿಯಾದ ಬಟ್ಟೆ ಧರಿಸುವುದರಿಂದ ಗುಪ್ತಾಂಗಗಳಲ್ಲಿ ಗಾಳಿಯಾಡದೆ ತೇವಾಂಶ ಸಂಗ್ರಹವಾಗಿ ಶಿಲೀಂಧ್ರ ಸೋಂಕು ಉಂಟಾಗಬಹುದು.

Valentines Day Dress Code : ಪ್ರೇಮಿಗಳ ದಿನದಂದು ನಿಮ್ಮ ರಾಶಿಗನುಗುಣವಾಗಿ ಬಣ್ಣದ ಬಟ್ಟೆ ಧರಿಸಿ ನಿಮ್ಮ ಸಂಬಂಧ ಉತ್ತಮವಾಗಿಸಿ…!

ಹಾಗೇ ಬಿಗಿಯಾದ ಬಟ್ಟೆ ಧರಿಸಿದಾಗ ಉಸಿರಾಡಲು ಕಷ್ಟವಾಗುತ್ತದೆ. ಇದರಿಂದ ದೇಹದಲ್ಲಿ ಆಮ್ಲಜನಕದ ಮಟ್ಟ ಕಡಿಮೆಯಾಗಿ ನೀವು ಮೂರ್ಛೆ ಹೋಗಬಹುದು.

 


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...