Kannada Duniya

ಬದಲಾಗುತ್ತಿರುವ ಋತುವಿನಲ್ಲಿ ಉಸಿರಾಟದ ಸಮಸ್ಯೆ ಕಾಡಿದರೆ ಈ ಸಲಹೆ ಪಾಲಿಸಿ….!

 

ವಾತಾವರಣ ಬದಲಾದಂತೆ ಹಲವರಲ್ಲಿ ಉಸಿರಾಟದ ಸಮಸ್ಯೆಗಳು ಕಾಡುತ್ತದೆ. ಅದರಲ್ಲೂ ಮಳೆಗಾಲದಲ್ಲಿ ವಾತಾವರಣ ತುಂಬಾ ತಂಪಾಗಿರುವ ಕಾರಣ ಹೆಚ್ಚಿನ ಜನರಲ್ಲಿ ಶೀತ, ಕಫ, ಕೆಮ್ಮುವಿನ ಸಮಸ್ಯೆ ಕಂಡುಬರುತ್ತದೆ. ಅಂತವರಲ್ಲಿ ಉಸಿರಾಟದ ಸಮಸ್ಯೆ ಹೆಚ್ಚು ಕಾಡುತ್ತದೆ. ಹಾಗಾಗಿ ಈ ಸಮಸ್ಯೆಯನ್ನು ನಿವಾರಿಸಲು ಈ ಸಲಹೆ ಪಾಲಿಸಿ.

ಉಸಿರಾಟದ ಸಮಸ್ಯೆಯಿಂದ ಬಳಲುತ್ತಿರುವವರು ಪ್ರತಿದಿನ ಅರಿಶಿನದ ಹಾಲನ್ನು ಕುಡಿಯಿರಿ. ಇದರಲ್ಲಿ ಆ್ಯಂಟಿ ಬ್ಯಾಕ್ಟೀರಿಯಲ್ ಗುಣಗಳಿರುವುದರಿಂದ ಇದು ಉಸಿರಾಟದ ಸಮಸ್ಯೆಗೆ ಕಾರಣವಾಗುವಂತಹ ಬ್ಯಾಕ್ಟೀರಿಯಾಗಳನ್ನು ನಾಶ ಮಾಡುತ್ತದೆ.

ಹಾಗೇ ಪ್ರತಿದಿನ ಶುಂಠಿಯನ್ನು ಸೇವಿಸಿ. ಇದರಲ್ಲಿ ಕೂಡ ಬ್ಯಾಕ್ಟೀರಿಯಾಗಳನ್ನು ನಾಶ ಮಾಡುವ ಗುಣವಿದೆ. ಇದು ಕೂಡ ಉಸಿರಾಟದ ಸಮಸ್ಯೆಗಳನ್ನು ಹೋಗಲಾಡಿಸುತ್ತದೆ.

ಮಳೆಗಾಲದಲ್ಲಿ ಉಸಿರಾಟದ ಸಮಸ್ಯೆಗಳನ್ನು ದೂರ ಮಾಡಲು ಗಡಮೂಲಿಕೆ ಚಹಾಗಳನ್ನು ಸೇವಿಸಿ. ದಾಲ್ಚಿನ್ನಿ, ತುಳಸಿ, ಶುಂಠಿ, ಜೇನುತುಪ್ಪ, ನಿಂಬೆಯಿಂದ ತಯಾರಿಸಿದ ಚಹಾವನ್ನು ಸೇವಿಸಿ.

Ginger for pregnant women: ಗರ್ಭಾವಸ್ಥೆಯಲ್ಲಿ ಶುಂಠಿ ಬಳಸಿದರೆ ಏನಾಗುತ್ತದೆ ಗೊತ್ತಾ…?

ಮಳೆಗಾಲದಲ್ಲಿ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿರುವವರು ಪ್ರತಿದಿನ ಜೇನುತುಪ್ಪದಲ್ಲಿ ಕರಿಮೆಣಸಿನ ಪುಡಿಯನ್ನು ಬೆರೆಸಿ ಸೇವಿಸಿ. ಇದು ಶೀತ, ಕಫದಿಂದ ಮುಕ್ತಿ ನೀಡುತ್ತದೆ. ಇದರಿಂದ ಉಸಿರಾಟದ ಸಮಸ್ಯೆ ಕಾಡುವುದಿಲ್ಲ.

 


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...