Kannada Duniya

ಪುರುಷರಲ್ಲಿ ಈ ಸಮಸ್ಯೆಗಳು ಕಾಡುತ್ತವೆ ಪೋಷಕಾಂಶಗಳ ಕೊರತೆಯಾದರೆ…!

ಪುರುಷರ ಆರೋಗ್ಯಕ್ಕೆ ವಿಟಮಿನ್ ಗಳು ಮತ್ತು ಖನಿಜಗಳು ಹೆಚ್ಚಾಗಿ ಬೇಕು. ಆದರೆ ಪುರುಷರು ಕುಟುಂಬದ ಜವಾಬ್ದಾರಿಯನ್ನು ನಿರ್ವಹಿಸುವಾಗ ತಮ್ಮ ಆರೋಗ್ಯದ ಬಗ್ಗೆ ಕಾಳಜಿವಹಿಸುವುದಿಲ್ಲ. ಇದರಿಂದ ಅವರ ದೇಹದಲ್ಲಿ ಪೋಷಕಾಂಶಗಳ ಕೊರತೆಯಾಗಿ ಈ ಸಮಸ್ಯೆಗಳು ಕಾಡಲು ಶುರುವಾಗುತ್ತದೆ.

ಪ್ರಾಸ್ಟೇಟ್ ಪುರುಷರ ದೇಹದಲ್ಲಿರುವ ಒಂದು ಅಂಗವಾಗಿದೆ. ಇದು ವೀರ್ಯ ದ್ರವವನ್ನು ಉತ್ಪಾದಿಸುತ್ತದೆ. ಪುರುಷರಲ್ಲಿ ಪೋಷಕಾಂಶಗಳ ಕೊರತೆಯದಾಗ ಈ ಪ್ರಾಸ್ಟೇಟ್ ನಲ್ಲಿ ಸಮಸ್ಯೆ ಉಂಟಾಗುತ್ತದೆ. ಇದರಿಂದ ಅವರು ಪ್ರಾಸ್ಟೇಟ್ ಕ್ಯಾನ್ಸರ್ ಗೆ ಒಳಗಾಗುತ್ತಾರೆ.ಕೆಲವು ಪುರುಷರು ವಯಸ್ಸಾದಂತೆ ನಿಮಿರುವಿಕೆ ಅಪಸಾಮಾನ್ಯ ಸಮಸ್ಯೆಗೆ ಒಳಗಾಗುತ್ತಾರೆ.

ಇದರಿಂದ ಅವರು ಲೈಂಗಿಕ ಜೀವನದ ಸುಖವನ್ನು ಅನುಭವಿಸಲು ಸಾಧ್ಯವಾಗುವುದಿಲ್ಲ. ಇದರಿಂದ ಪುರುಷರಲ್ಲಿ ಖಿನ್ನತೆ ಹೆಚ್ಚಾಗುತ್ತದೆ. ಇದರಿಂದ ಹೃದಯದ ಕಾಯಿಲೆಗಳು ಕಾಡುತ್ತದೆ.

ನಿಮ್ಮ ಕೈಕಾಲುಗಳಲ್ಲಿ ಕಂಡುಬರುವ ಸೆಳೆತ ನಿಮಗೆ ಈ ಸೂಚನೆಯನ್ನು ನೀಡುತ್ತದೆ

ಪುರುಷರಲ್ಲಿ ಪೋಷಕಾಂಶದ ಕೊರತೆಯಾದಾಗ ಟೆಸ್ಟೋಸ್ಟರಾನ್ ಹಾರ್ಮೋನ್ ಮಟ್ಟದಲ್ಲಿ ಅಸಮತೋಲನ ಉಂಟಾಗುತ್ತದೆ. ಇದು ಪುರುಷರ ವೀರ್ಯ ಉತ್ಪಾದನೆಯ ಮೇಲೆ ಪ್ರಭಾವ ಬೀರುತ್ತದೆ. ಇದರಿಂದ ಪುರುಷರ ಸ್ನಾಯುಗಳು ಮತ್ತು ಮೂಳೆಗಳು ದುರ್ಬಲವಾಗುತ್ತದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...