Kannada Duniya

ನೀವು ಮಿತಿಯಿಲ್ಲದೇ ತಿನ್ನುವುದಕ್ಕೆ ಇದು ಕೂಡ ಕಾರಣವಂತೆ ನೋಡಿ….!

ಯಾವಾಗಲೂ ಆಹಾರವನ್ನು ಸಮತೋಲನದಲ್ಲಿ ತಿನ್ನಬೇಕು. ಇಲ್ಲವಾದರೆ ಇದರಿಂದ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಕಾಡುತ್ತದೆ ಮತ್ತು ತೂಕ ಹೆಚ್ಚಾಗುತ್ತದೆ. ಹಾಗಾಗಿ ಆಹಾರವನ್ನು ಸರಿಯಾದ ಪ್ರಮಾಣದಲ್ಲಿ ಸೇವಿಸಿ. ಆದರೆ ಕೆಲವರು ಅತಿಯಾಗಿ ಆಹಾರವನ್ನು ಸೇವಿಸುತ್ತಾರೆ. ಇದಕ್ಕೆ ಕಾರಣವೇನು ಎಂಬುದನ್ನು ತಿಳಿಯಿರಿ.

ನೀವು ಅತಿಯಾಗಿ ತಿನ್ನಲು ದೊಡ್ಡ ತಟ್ಟೆಯನ್ನು ಬಳಸುವುದು ಕಾರಣವಾಗಿದೆ. ತಟ್ಟೆಯ ತುಂಬಾ ಆಹಾರವನ್ನು ಹಾಕಿಕೊಳ್ಳುವುದರಿಂದ ನೀವು ಅದನ್ನು ಪೂರ್ತಿ ತಿಂದು ಮುಗಿಸಬೇಕಾಗುತ್ತದೆ.

ಹಾಗೇ ಕೆಲವರು ದುಃಖ, ಒತ್ತಡ, ಒಂಟಿತನ ಮುಂತಾದ ಭಾವನಾತ್ಮಕ ಕಾರಣಗಳಿಂದ ಅತಿಯಾಗಿ ಆಹಾರವನ್ನು ಸೇವಿಸುತ್ತಾರೆ.

ಕೆಲವರು ಆಹಾರ ಸೇವಿಸುವಾಗ ಟಿವಿ, ಮೊಬೈಲ್ ಅನ್ನು ನೋಡುತ್ತಿರುತ್ತಾರೆ. ಇದರಿಂದ ಅವರಿಗೆ ಎಷ್ಟು ಆಹಾರ ಸೇವಿಸಿದೆ ಎಂಬ ಅರಿವು ಇಲ್ಲದೇ ಅತಿಯಾಗಿ ಆಹಾರ ಸೇವಿಸುತ್ತಾರೆ.

ದೇಹದ ಭಾಗಗಳಲ್ಲಿ ಉರಿಯೂತದ ಸಮಸ್ಯೆ ಇದ್ದರೆ ಈ ಆಹಾರ ಸೇವಿಸಿ….!

ಅಲ್ಲದೇ ಇನ್ನೂ ಕೆಲವರು ಒಂದು ಹೊತ್ತು ಆಹಾರ ಸೇವಿಸುವುದನ್ನು ತಪ್ಪಿಸುತ್ತಾರೆ. ಇದರಿಂದ ಅವರಿಗೆ ಹಸಿವಾಗಿ ಅತಿಯಾಗಿ ಆಹಾರವನ್ನು ಸೇವಿಸುತ್ತಾರೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...