Kannada Duniya

ನೀವು ಬಳಸುತ್ತಿರುವ ಅರಿಶಿನ ಅಸಲಿಯೇ? ನಕಲಿಯೇ? ಎಂದು ಹೀಗೆ ಕಂಡು ಹಿಡಿಯಿರಿ!

ಅಡುಗೆ ಮನೆಯಲ್ಲಿ ಮಸಾಲೆಗಳಿಗೆ ಬೆರೆಸುವ ಅರಿಶಿನದ ಸೇವನೆಯಿಂದ ಹಲವು ಆರೋಗ್ಯ ಪ್ರಯೋಜನಗಳಿವೆ ಎಂಬುದು ಎಲ್ಲರಿಗೂ ತಿಳಿದ ವಿಚಾರ.  ಬ್ಯಾಕ್ಟೀರಿಯಾ ನಿರೋಧಕ ಗುಣ ಹೆಚ್ಚಿರುವ ಅರಿಶಿನದ ಸೇವನೆಯಿಂದ ವ್ಯಕ್ತಿಯ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ.
ಆದರೆ ಮಾರುಕಟ್ಟೆಯಿಂದ ದುಡ್ಡು ಕೊಟ್ಟು ತಂದ ಅರಿಶಿನ ಪುಡಿಯಲ್ಲಿ ಕಲಬೆರಕೆ ವಸ್ತುಗಳು ಬೆರೆತಿರುವ ಸಾಧ್ಯತೆ ಹೆಚ್ಚು. ಆದರೆ ನೀವು ಮನೆಯಲ್ಲಿ ಇದನ್ನು ಪರಿಶೀಲಿಸಬಹುದು.
ಮೊದಲಿಗೆ ಒಂದು ಚಮಚ ಅರಿಶಿನವನ್ನು ತೆಗೆದುಕೊಂಡು ಒಂದು ಲೋಟ ನೀರಿಗೆ ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ. ಅದು ಕರಗಿದ ಬಳಿಕ ಕೆಳಭಾಗದಲ್ಲಿ ಅರಿಶಿನದ ಕಣಗಳು ನೆಲೆಗೊಂಡಿವೆಯೇ ಇಲ್ಲವೇ ಎಂಬುದನ್ನು ಪರಿಶೀಲಿಸಿ. ಒಂದು ವೇಳೆ ತಳ ಭಾಗದಲ್ಲಿ ಅದು ನೆಲೆಗೊಂಡಿದ್ದರೆ ಅದನ್ನು ನಕಲಿ ಅರಿಶಿನ. ನಿಜವಾದ ಅರಿಶಿನವಾಗಿದ್ದರೆ ಅದು ಕರಗುವುದಿಲ್ಲ ಮತ್ತು ನೀರಿನಲ್ಲಿ ತೇಲುತ್ತದೆ.
ಒಂದು ಚಿಟಿಕೆ ಅರಿಶಿನ ಪುಡಿಯನ್ನು ಅಂಗೈಯಲ್ಲಿ ಇರಿಸಿ ಹೆಬ್ಬೆರಳಿನಿಂದ ಉಜ್ಜಿ, ಅರಿಶಿನವು ಶುದ್ಧವಾಗಿದ್ದರೆ ಅದು ನಿಮ್ಮ ಕೈಯಲ್ಲಿ ಹಳದಿ ಕಲೆಯನ್ನು ಉಳಿಸಿಬಿಡುತ್ತದೆ. ನಕಲಿ ಅರಶಿನದಿಂದ ತಯಾರಿಸಿದ ವಸ್ತುಗಳಾಗಿದ್ದರೆ ಕೈ ತೊಳೆದ ತಕ್ಷಣ ಸ್ವಚ್ಛಗೊಳ್ಳುತ್ತದೆ.
ನಕಲಿ ಅರಿಶಿನದಿಂದ ಹೊಟ್ಟೆಗೆ ಸಂಬಂಧಿಸಿದ ಹಲವು ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಹಾಗಾಗಿ ಖರೀದಿಸುವಾಗ ಈ ಕುರಿತು ಎಚ್ಚರ ವಹಿಸಿ.

Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...