Kannada Duniya

ತೆಂಗಿನ ಚಿಪ್ಪನ್ನು ಅಡುಗೆಮನೆಯಲ್ಲಿ ಈ ರೀತಿಯಾಗಿ ಬಳಸಿಕೊಳ್ಳಬಹುದು ಗೊತ್ತಾ..?

ಹಿಂದೆ ಸ್ಟೀಲ್ ಪಾತ್ರೆಗಳು ಸಾಕಷ್ಟು ಇಲ್ಲದಿದ್ದಾಗ ತೆಂಗಿನ ಚಿಪ್ಪಿಗೆ ಕೋಲು ಕಟ್ಟಿ ಅದನ್ನು ಸೌಟಾಗಿ ಬಳಸುತ್ತಿದ್ದರು.

ಕಡೆಯುವ ಕಲ್ಲಿನಲ್ಲಿ ಕಡೆದು ನೀರು ತೆಗೆಯಲು ತೆಂಗಿನ ಚಿಪ್ಪನ್ನು ಬಳಸುತ್ತಿದ್ದರು. ಇಂದು ಅದು ಫ್ಯಾಶನ್ ರೂಪದಲ್ಲಿ ಮತ್ತೆ ಅಡುಗೆ ಮನೆಗೆ ಆಗಮಿಸಿದೆ.

-ಅಡುಗೆಯಲ್ಲಿ ಇದನ್ನು ಬಳಸುವುದರಿಂದ ಹಲವು ಆರೋಗ್ಯದ ಲಾಭಗಳನ್ನು ಪಡೆದುಕೊಳ್ಳಬಹುದು ಎಂಬುದನ್ನು ವೈದ್ಯಲೋಕ ದೃಢಪಡಿಸಿದೆ. ತೆಂಗಿನ ಚಿಪ್ಪನ್ನು ಅನ್ನ ಬೇಯಿಸುವಾಗ ಹಾಕಿ ತಿರುಗಿಸುವುದರಿಂದ ತೆಂಗಿನ ಸುವಾಸನೆಯೂ ಅನ್ನವನ್ನು ಸೇರಿಕೊಳ್ಳುತ್ತದೆ ಎನ್ನಲಾಗಿದೆ.

-ತೆಂಗಿನ ಚಿಪ್ಪಿನಲ್ಲಿ ಇರುವ ನೈಸರ್ಗಿಕ ನಾರಿನ ಅಂಶವು ನಿಮ್ಮ ದೇಹವನ್ನು ಸೇರುತ್ತದೆ ಹಾಗೂ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಹೃದಯದ ಆರೋಗ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎನ್ನಲಾಗಿದೆ.

ಸಕ್ಕರೆಯನ್ನು ಮುಖಕ್ಕೆ ಹೀಗೆ ಹಚ್ಚಿದರೆ ಮುಖ ಸುಂದರವಾಗಿ ಕಾಣುತ್ತದೆ

-ತೆಂಗಿನ ಚಿಪ್ಪಿನಲ್ಲಿ ಸಾಕಷ್ಟು ಪ್ರಮಾಣದ ಪೋಷಕಾಂಶಗಳು ಹಾಗೂ ಖನಿಜ ಅಂಶಗಳು ತುಂಬಿದೆ ಎನ್ನುತ್ತಾರೆ ಆರೋಗ್ಯ ತಜ್ಞರು. ಹಾಗಾಗಿ ಇದು ಮಲಬದ್ಧತೆಯಂತಹ ಸಮಸ್ಯೆ ಬರದಂತೆ ನೋಡಿಕೊಳ್ಳುತ್ತದೆ. ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದ ಮುಕ್ತಿ ನೀಡುತ್ತದೆ.

-ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಿ, ತೆಂಗಿನ ಚಿಪ್ಪಿನ ಅಂತಹ ನೈಸರ್ಗಿಕ ವಸ್ತುಗಳನ್ನು ಬಳಸುವುದರಿಂದ ಪರಿಸರ ಸಂರಕ್ಷಣೆ ಸಾಧ್ಯ, ಅದರೊಂದಿಗೆ ಆರೋಗ್ಯ ಭಾಗ್ಯವೂ ನಿಮ್ಮದಾಗುತ್ತದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...