Kannada Duniya

ನಕಾರಾತ್ಮಕ ಭಾವನೆಗಳಿಂದ ಹೊರಬರುವುದು ಹೇಗೆ….?

ನೀವು ಮಾಡುತ್ತಿರುವ ಕೆಲವು ಸಂಗತಿಗಳು ನಿಮಗೆ ತಿಳಿಯದಂತೆ ನಿಮ್ಮ ದೇಹದ ಶಕ್ತಿಯನ್ನು ಕುಗ್ಗಿಸುತ್ತಿರಬಹುದು ಅಥವಾ ನಕಾರಾತ್ಮಕ ಭಾವನೆಗಳು ನಿಮ್ಮ ಮನಸ್ಸಿನಲ್ಲಿ ತುಂಬುತ್ತಿರಬಹುದು. ಇದರಿಂದ ದೂರವಿರುವ ಹೊಣೆಗಾರಿಕೆ ನಿಮ್ಮದೇ.

ಟೈಮ್ ಪಾಸ್ ಗಾಗಿ ಕೆಲವರು ಅನಗತ್ಯ ವಿಡಿಯೋಗಳನ್ನು ವೀಕ್ಷಿಸಲು ಆರಂಭಿಸುತ್ತಾರೆ. ಇದರಿಂದ ದೇಹದ ಆಂತರಿಕ ಶಕ್ತಿ ಕುಗ್ಗುತ್ತದೆ ಹಾಗೂ ಮನಸ್ಸು ಉದ್ವಿಗ್ನಗೊಳ್ಳುತ್ತದೆ.

ವಿನಾಕಾರಣ ಸುಳ್ಳು ಹೇಳಿದಾಗ ಅಥವಾ ಇತರ ವ್ಯಕ್ತಿಯ ಮೇಲೆ ಅಪ್ರಾಮಾಣಿಕತೆಯನ್ನು ಹೇರಿದಾಗಲೂ ನಿಮ್ಮ ಮನಸ್ಸು ಭಾರವಾಗುತ್ತದೆ.

ಅದು ನಮ್ಮ ದೇಹದ ಶಕ್ತಿಯನ್ನು ಕುಗ್ಗಿಸುತ್ತದೆ. ಅಂದರೆ ಸುಳ್ಳನ್ನು ಅರಗಿಸಿಕೊಳ್ಳಲು ನಮ್ಮ ದೇಹಕ್ಕೆ ಸಾಮಾನ್ಯಕ್ಕಿಂತ ಹೆಚ್ಚಿನ ಶಕ್ತಿ ಬೇಕಾಗುತ್ತದೆ. ಹಾಗಾಗಿ ಸಣ್ಣ ಪುಟ್ಟ ವಿಚಾರಗಳಿಗೂ ಸುಳ್ಳು ಹೇಳುವುದನ್ನು ತಪ್ಪಿಸಿ.

ಮಗುವಿನ ಮೂಳೆಗಳು ಬಲವಾಗಿ ಬೆಳೆಯಬೇಕಾದರೆ ಈ ಆಹಾರಗಳನ್ನು ನೀಡಿ…!

ಹವ್ಯಾಸಕ್ಕೆ ಅಥವಾ ಇತರ ಕಾರಣಗಳಿಗೆ ನಿತ್ಯ ಮದ್ಯಪಾನ ಮಾಡುವುದನ್ನು ನಿಲ್ಲಿಸಿ. ಇದರಿಂದ ದೇಹದ ಶಕ್ತಿ ಕಡಿಮೆಯಾಗುತ್ತದೆ ಹಾಗೂ ಆರೋಗ್ಯವು ಹಾಳಾಗುತ್ತದೆ.

 


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...