Kannada Duniya

ದೇಹದ ಕೆಳಭಾಗದ ಆಕಾರವನ್ನು ಕಾಪಾಡಲು ಈ ಸ್ಕ್ವಾಟ್ ಅನ್ನು ಅಭ್ಯಾಸ ಮಾಡಿ

ದೇಹದ ಆಕಾರವನ್ನು ಉತ್ತಮವಾಗಿಡಲು ಕೆಲವರು ಹಲವಾರು ವ್ಯಾಯಾಮಗಳನ್ನು ಮಾಡುತ್ತಾರೆ. ಆದರೆ ಸುಮೋ ಸ್ಕ್ವಾಟ್ ದೇಹದ ಕೆಳಗಿನ ಭಾಗಕ್ಕೆ ಉತ್ತಮ ಆಕಾರ ನೀಡಲು ಸಹಾಯ ಮಾಡುತ್ತದೆ. ಇದನ್ನು ನಿಯಮಿತವಾಗಿ ಅಭ್ಯಾಸ ಮಾಡಿದರೆ ಉತ್ತಮ ಫಲಿತಾಂಶ ಪಡೆಯಬಹುದಂತೆ.

ಇದನ್ನು ಮಾಡಲು ನೇರವಾಗಿ ನಿಂತುಕೊಳ್ಳಿ. ನಿಮ್ಮ ಕಾಲುಗಳನ್ನು ನಿಮ್ಮ ಭುಜದ ಅಗಲಕ್ಕೆ ತನ್ನಿ. ಪಾದಗಳ ಕಾಲ್ಬೆರಳು ಸರಿ ಸುಮಾರು 45 ಡಿಗ್ರಿ ಕೋನದಲ್ಲಿರಬೇಕು. ನಂತರ ನಿಮ್ಮ ಕಾಲುಗಳನ್ನು ಅಗಲವಾಗಿಸಿ ಮತ್ತು ನಿಧಾನವಾಗಿ ಕುಳಿತುಕೊಳ್ಳಲು ಪ್ರಯತ್ನಿಸಿ. ಕುಳಿತುಕೊಳ್ಳಲು ನಿಮಗೆ ಕಷ್ಟವಾದರೆ ಗೋಡೆಯ ಬೆಂಬಲವನ್ನು ತೆಗೆದುಕೊಳ್ಳಬಹುದು. 2-3 ಸೆಕೆಂಡುಗಳ ಕಾಲ ನೀವು ಈ ಸ್ಥಾನದಲ್ಲಿರಿ. ಉಸಿರನ್ನು ಬಿಡುತ್ತಾ ಮೇಲಕ್ಕೆ ಬನ್ನಿ. ಇದನ್ನು 15-20 ಸಲ ಪುನರಾವರ್ತಿಸಿ.

ಇದು ಕಾಲುಗಳನ್ನು ಬಲಪಡಿಸುತ್ತದೆ. ತೊಡೆಯ ಮೇಲಿನ ಕೊಬ್ಬನ್ನು ಕಡಿಮೆ ಮಾಡಲು ಮತ್ತು ಕೆಳಗಿನ ದೇಹವನ್ನು ಆಕಾರದಲ್ಲಿಡಲು ಸಹಾಯ ಮಾಡುತ್ತದೆ. ಮತ್ತು ಒಂದೇ ಕಡೆ ಕುಳಿತು ಕೆಲಸ ಮಾಡುವವರ ದೇಹ ಸಕ್ರಿಯವಾಗಿರಲು ಈ ವ್ಯಾಯಾಮ ಮಾಡಬಹುದು. ಇದು ಇಡೀ ದೇಹಕ್ಕೆ ಒಳ್ಳೆಯದಂತೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...