Kannada Duniya

ದಾಸವಾಳ ಸೊಪ್ಪಿನ ದೋಸೆ ಸವಿದು ನೋಡಿ….!

ದಾಸವಾಳ ಸೊಪ್ಪಿನ ಪ್ರಯೋಜನದ ಬಗ್ಗೆ ತುಂಬಾ ಜನರಿಗೆ ಗೊತ್ತಿದೆ. ಇದು ಕೂದಲ ಬೆಳವಣಿಗೆಗೆ ತುಂಬಾ ಒಳ್ಳೆಯದು. ಹಾಗೇ ಇದರಿಂದ ರುಚಿಯಾದ ದೋಸೆ ಕೂಡ ಮಾಡಬಹುದು. ಇದು ಕೂಡ ಆರೋಗ್ಯಕ್ಕೆ ಒಳ್ಳೆಯದು. ಮಾಡುವ ವಿಧಾನದ ಬಗ್ಗೆ ಇಲ್ಲಿದೆ ನೋಡಿ.

ಅಕ್ಕಿ-1 ಕಪ್, ಅವಲಕ್ಕಿ-1/2 ಕಪ್, ಕೆಂಪು/ಬಿಳಿ ದಾಸವಾಳದ ಎಲೆ-20, ಉಪ್ಪು ರುಚಿಗೆ ತಕ್ಕಷ್ಟು, ಎಣ್ಣೆ- ಸ್ವಲ್ಪ.
ಮೊದಲಿಗೆ ಅಕ್ಕಿಯನ್ನು ಚೆನ್ನಾಗಿ ತೊಳೆದು 2 ಗಂಟೆಗಳ ಕಾಲ ನೆನೆಸಿರಿ. ದಾಸವಳಾದ ಎಲೆಗಳನ್ನು ಕ್ಲೀನ್ ಮಾಡಿಕೊಂಡು ಕತ್ತರಿಸಿಕೊಳ್ಳಿ. ಅಕ್ಕಿಯನ್ನು ಒಂದು ಮಿಕ್ಸಿ ಜಾರಿಗೆ ಹಾಕಿ ಅದಕ್ಕೆ ದಾಸವಾಳದ ಎಲೆ ಸೇರಿಸಿ ರುಬ್ಬಿಕೊಳ್ಳಿ. ನಂತರ ಅವಲಕ್ಕಿಯನ್ನು ಹಾಕಿ ರುಬ್ಬಿಕೊಳ್ಳಿ.

Drinking water at night: ರಾತ್ರಿಯ ವೇಳೆ ನೀರು ಕುಡಿಯುವುದು ಆರೋಗ್ಯಕ್ಕೆ ಉತ್ತಮವೇ…?

ಹಿಟ್ಟು ನಯವಾದಾಗ ಅದನ್ನು ಒಂದು ಪಾತ್ರೆಗೆ ತೆಗೆದಿಟ್ಟುಕೊಂಡು ಹುದುಗು ಬರಲು 8 ಗಂಟೆಗಳ ಕಾಲ ಇಟ್ಟುಬಿಡಿ. ಬೆಳಿಗ್ಗೆ ಈ ಹಿಟ್ಟಿಗೆ ಉಪ್ಪು ಸೇರಿಸಿ ಮಿಕ್ಸ್ ಮಾಡಿಕೊಳ್ಳಿ. ಹಿಟ್ಟಿಗೆ ತುಂಬಾ ನೀರು ಸೇರಿಸಬೇಡಿ. ಹದವಾಗಿರಲಿ. ಗ್ಯಾಸ್ ಮೇಲೆ ದೋಸೆ ತವಾ ಇಟ್ಟು ಅದಕ್ಕೆ ಎಣ್ಣೆ ಹಚ್ಚಿ ಒಂದು ಸೌಟು ಹಿಟ್ಟು ಹಾಕಿ ದೋಸೆ ಮಾಡಿಕೊಳ್ಳಿ. ಎರಡೂ ಕಡೆ ಚೆನ್ನಾಗಿ ಬೇಯಿಸಿಕೊಳ್ಳಿ. ಕಾಯಿಚಟ್ನಿ, ತುಪ್ಪದ ಜೊತೆ ಸವಿಯಿರಿ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...