Kannada Duniya

ತೂಕ ನಷ್ಟವಾಗಲು ತಜ್ಞರ ಈ ಸಲಹೆಗಳನ್ನು ಪಾಲಿಸಿ….!

ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ತೂಕ ಹೆಚ್ಚಳ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹಾಗಾಗಿ ಅವರು ತಮ್ಮ ತೂಕವನ್ನು ಇಳಿಸಿಕೊಳ್ಳಲು ಡಯೆಟ್, ಜಿಮ್ ಗಳಲ್ಲಿ ವರ್ಕೌಟ್ ಮಾಡುತ್ತಿದ್ದಾರೆ. ಆದರೆ ತೂಕ ಹೆಚ್ಚಳ ಸಮಸ್ಯೆಯಿಂದ ಬಳಲುತ್ತಿರುವವರು ತೂಕ ಇಳಿಸಲು ಕಷ್ಟವಾಗುತ್ತಿದ್ದರೆ ತಜ್ಞರ ಈ ಸಲಹೆಗಳನ್ನು ಪಾಲಿಸಿ.

ನಿಮಗೆ ಹಸಿವಾದಾಗ ಮಾತ್ರ ಊಟ ಮಾಡಿ. ಬೆಳಿಗ್ಗೆ ಉಪಹಾರ, ಮಧ್ಯಾಹ್ನ ಊಟ ಮತ್ತು ರಾತ್ರಿ ಊಟವನ್ನು ಸೇವಿಸಿ. ಹಾಗೇ ಹೆಚ್ಚಾಗಿ ದ್ರವ ರೂಪದ ಆಹಾರವನ್ನು ಸೇವಿಸಿ.

ನೀವು ತಿನ್ನುವಂತಹ ಸಮಯಗಳು ತೂಕ ನಿಯಂತ್ರಣಕ್ಕೆ ಬಹಳ ಮೂಖ್ಯ. ಊಟಗಳ ನಡುವೆ ಕನಿಷ್ಠ ಮೂರು ಗಂಟೆಗಳ ಕಾಲ ಅಂತರವಿರಲಿ ಮತ್ತು ರಾತ್ರಿ ಚಯಾಪಚಯ ಕ್ರಿಯೆ ನಿಧಾನವಾಗಿರುತ್ತದೆ. ಹಾಗಾಗಿ ರಾತ್ರಿ 9 ಗಂಟೆಯ ಬಳಿಕ ಆಹಾರ ಸೇವಿಸಬೇಡಿ.

ನೀವು ಇಷ್ಟಪಡುವಂತಹ ಆಹಾರ ಸೇವಿಸಿ. ಆಗ ತೃಪ್ತಿ ಇರುತ್ತದೆ. ಮತ್ತು ಅದಕ್ಕೆ ಕೆಲವು ಗಡಿಗಳನ್ನು ಹಾಕಿಕೊಳ್ಳಿ ಮತ್ತು ಅದನ್ನು ಶ್ರದ್ಧೆಯಿಂದ ಅನುಸರಿಸಿ.

ತೂಕ ಕಡಿಮೆ ಮಾಡಲು ತೆಂಗಿನ ಹಾಲಿನಿಂದ ತಯಾರಿಸಿದ ಈ ಪಾನೀಯ ಸೇವಿಸಿ

ಕೆಲವರಿಗೆ ಎಷ್ಟೇ ಆಹಾರ ಸೇವಿಸಿದರೂ ತೃಪ್ತಿಯಾಗುವುದಿಲ್ಲ. ಅಂತವರು ಪದೇ ಪದೇ ತಿನ್ನುವ ಬದಲು ಯಾಕೆ ನೀವು ತೃಪ್ತಿ ಹೊಂದುತ್ತಿಲ್ಲ ಎಂಬುದನ್ನು ತಿಳಿದುಕೊಳ್ಳಿ. ಮತ್ತು ಅದನ್ನು ಪರಿಹರಿಸಿಕೊಳ್ಳಿ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...