Kannada Duniya

ತೂಕ ಇಳಿಸಲು ಹೀಗೆ ಧ್ಯಾನ ಮಾಡಿ ನೋಡಿ!

ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ತೂಕ ಹೆಚ್ಚಳ ಸಮಸ್ಯೆಗೆ ಒಳಗಾಗುತ್ತಾರೆ. ಹಾಗಾಗಿ ತೂಕವನ್ನು ಇಳಿಸಿಕೊಳ್ಳಲು ಹಲವಾರು ಕ್ರಮಗಳನ್ನು ಅನುಸರಿಸುತ್ತಾರೆ. ಆದರೆ ಇದರಿಂದ ತೂಕ ಕಡಿಮೆಯಾಗದಿದ್ದರೆ ಈ ರೀತಿಯಲ್ಲಿ ಧ್ಯಾನ ಮಾಡಿ. ಇದು ತೂಕವನ್ನು ಇಳಿಸಿಕೊಳ್ಳಲು ಸಹಾಯ ಮಾಡುತ್ತದೆಯಂತೆ.

ತೂಕ ಇಳಿಸಿಕೊಳ್ಳಲು ಧ್ಯಾನ ಬಹಳ ಪ್ರಯೋಜನಕಾರಿಯಾಗಿದೆಯಂತೆ. ಇದು ಹೆಚ್ಚುವರಿ ಕೊಬ್ಬನ್ನು ಸುಡಲು ಸಹಾಯ ಮಾಡುತ್ತದೆಯಂತೆ. ಹಾಗಾಗಿ ಶಾಂತವಾದ ಸ್ಥಳದಲ್ಲಿ ಕುಳಿತು ಆಳವಾದ ಉಸಿರನ್ನು ತೆಗೆದುಕೊಳ್ಳಿ. ಅದನ್ನು ಕೆಲವು ಸೆಕೆಂಡುಗಳ ಕಾಲ ಹಿಡಿದುಕೊಳ್ಳಿ. ನಂತರ ನಿಧಾನವಾಗಿ ಬಿಡಿ, ಉಸಿರಾಡುವಾಗ ನಿಮ್ಮ ಎದೆ ಮತ್ತು ಹೊಟ್ಟೆಯ ಚಲನೆಯನ್ನು ಅನುಭವಿಸಿ. ಈ ಸಮಯದಲ್ಲಿ ದೇಹವು ಸ್ಥಿರವಾಗಿರಲಿ. ಇದನ್ನು ಮಾಡುವಾಗ 10 ನಿಮಿಷಗಳ ಕಾಲ ನಿಮ್ಮ ಉಸಿರಾಟವನ್ನು ಕೇಂದ್ರೀಕರಿಸಲು ಪ್ರಯತ್ನಿಸಿ. ಮತ್ತು ನಿಮ್ಮ ಗಮನ ಉಸಿರಾಟದ ಮೇಲಿರಲಿ.

ಇದರಿಂದ ಒತ್ತಡ ಮತ್ತು ಆತಂಕ ನಿವಾರಣೆಯಾಗುತ್ತದೆ. ಇದು ಅತಿಯಾಗಿ ತಿನ್ನುವುದನ್ನು ತಪ್ಪಿಸುತ್ತದೆ. ಇದು ಚಯಾಪಚಯ ಕ್ರಿಯೆಯನ್ನು ಸುಧಾರಿಸುತ್ತದೆ. ಇದರಿಂದ ದೇಹದಲ್ಲಿರುವ ಹೆಚ್ಚುವರಿ ಕೊಬ್ಬು ಕರಗುತ್ತದೆ. ಹಾಗಾಗಿ ಇದರಿಂದ ನಿಮ್ಮ ತೂಕ ನಿಯಂತ್ರಣದಲ್ಲಿರುತ್ತದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...