Kannada Duniya

ಡಿಟಾಕ್ಸ್ ಮಾಡಲು ಈ ಪದಾರ್ಥಗಳನ್ನು ಮಿಕ್ಸ್ ಮಾಡಿ ಸೇವಿಸಿ…!

ಲಿವರ್ ಒಂದು ಬಹುಮುಖ್ಯವಾದ ಅಂಗ. ಇದು ದೇಹದಿಂದ ವಿಷಕಾರಿ ರಾಸಾಯನಿಕಗಳನ್ನು ಹೊರಹಾಕುತ್ತದೆ. ಇದು ಆಹಾರವನ್ನು ಜೀರ್ಣ ಮಾಡಲು ಸಹಕಾರಿಯಾಗಿದೆ. ಹಾಗೇ ಕೆಲವು ಖನಿಜಗಳು, ವಿಟಮಿನ್ ಎ ಮತ್ತು ಕಬ್ಬಿಣವನ್ನು ಸಂಗ್ರಹಿಸುತ್ತದೆ. ಹಾಗಾಗಿ ಲಿವರ್ ಅನ್ನು ಡಿಟಾಕ್ಸ್ ಮಾಡಲು ಈ ಪದಾರ್ಥಗಳನ್ನು ಮಿಕ್ಸ್ ಮಾಡಿ ಸೇವಿಸಿ.

ಬಿಸಿ ನೀರು ಮತ್ತು ನಿಂಬೆ : ಬೆಚ್ಚಗಿರುವ ನೀರು ಲಿವರ್ ಅನ್ನು ಶುದ್ಧೀಕರಿಸುತ್ತದೆ.ಹಾಗಾಗಿ ಬಿಸಿ ನೀರಿಗೆ ನಿಂಬೆ ರಸ ಮಿಕ್ಸ್ ಮಾಡಿ ಕುಡಿದರೆ ಇದು ದೇಹದಿಂದ ವಿಷವನ್ನು ಹೊರಹಾಕಿ ಲಿವರ್ ಅನ್ನು ನಿರ್ವಿಷಗೊಳಿಸುತ್ತದೆ.

ಅರಿಶಿನ ಮತ್ತು ನಿಂಬೆ : ಅರಿಶಿನ ಸೇವನೆಯು ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಆದ್ದರಿಂದ ಲಿವರ್ ಡಿಟಾಕ್ಸ್ ಮಾಡಲು ಅರಿಶಿನವನ್ನು ಬಳಸಿ. ಇದು ಕಿಣ್ವ ಬೂಸ್ಟರ್ ಆಗಿ ಕಾರ್ಯ ನಿರ್ವಹಿಸುತ್ತದೆ.

ಪಿತ್ತಜನಕಾಂಗವನ್ನು ಆರೋಗ್ಯವಾಗಿಡಲು ಈ ವಸ್ತುಗಳನ್ನು ಪ್ರತಿದಿನ ಸೇವಿಸಿ

ಹಸಿರು ತರಕಾರಿಗಳು ಮತ್ತು ಹಸಿರು ಸೊಪ್ಪುಗಳು : ಹಸಿರು ತರಕಾರಿಗಳು ಮತ್ತು ಹಸಿರು ಸೊಪ್ಪುಗಳು ಲಿವರ್ ಅನ್ನು ನಿರ್ವಿಷಿಕರಣಗೊಳಿಸಲು ಸಹಾಯ ಮಾಡುತ್ತದೆ. ಹಾಗಾಗಿ ಇವೆರಡನ್ನು ಸೇರಿಸಿ ರುಬ್ಬಿ ರಸ ತೆಗೆದು ಕುಡಿಯಿರಿ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...