Kannada Duniya

ಗರ್ಭಾವಸ್ಥೆಯಲ್ಲಿ ಪಾಲಕ್ ಸೊಪ್ಪನ್ನು ತಿನ್ನುವುದು ಒಳ್ಳೆಯದೇ?

ಪಾಲಕ್ ಸೊಪ್ಪು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಲ್ಲಿ ಹಲವು ಪೋಷಕಾಂಶಗಳಿವೆ. ಇದನ್ನು ಸೇವಿಸಿ ದೇಜದ ಹಲವು ಸಮಸ್ಯೆಗಳನ್ನು ನಿವಾರಿಸಬಹುದು. ಆದರೆ ಗರ್ಭಿಣಿಯರು ಪಾಲಕ್ ಸೊಪ್ಪನ್ನು ಸೇವಿಸುವುದು ಒಳ್ಳೆಯದೇ? ಎಂಬುದನ್ನು ತಿಳಿಯಿರಿ.

ಗರ್ಭಿಣಿಯರಿಗೆ ಪಾಲಕ್ ಸೊಪ್ಪು ತುಂಬಾ ಒಳ್ಳೆಯದು. ಇದರಲ್ಲಿರುವ ಫೋಲಿಕ್ ಆಮ್ಲವು ಹುಟ್ಟಲಿರುವ ಮಗುವಿನ ಬೆಳವಣಿಗೆಗೆ ಅತ್ಯಗತ್ಯ. ಫೋಲಿಕ್ ಆಮ್ಲದ ಕೊರತೆಯಾದರೆ ಮಗುವಿನ ಬೆಳವಣಿಗೆಯಲ್ಲಿ ಸಮಸ್ಯೆಯಾಗುತ್ತದೆ. ಹಾಗಾಗಿ ಗರ್ಭಿಣಿಯರು ದಿನಕ್ಕೆ ಅರ್ಧ ಕಪ್ ಪಾಲಕ್ ಸೊಪ್ಪನ್ನು ಸೇವಿಸಿ.

ಆದರೆ ಗರ್ಭಿಣಿಯರು 2ನೇ ಮತ್ತು 3ನೇ ತಿಂಗಳಿನಲ್ಲಿ ಪಾಲಕ್ ಸೊಪ್ಪನ್ನು ಸೇವಿಸಬೇಡಿ. ಇದು ಮೂತ್ರಪಿಂಡದಲ್ಲಿ ಕಲ್ಲಿನ ಅಪಾಯವನ್ನು ಹೆಚ್ಚಿಸುತ್ತದೆ. ಮತ್ತು ಮಲಬದ್ಧತೆ ಮತ್ತು ಗ್ಯಾಸ್ ಸಮಸ್ಯೆಯನ್ನು ಹೆಚ್ಚಿಸುತ್ತದೆಯಂತೆ. ಹಾಗಾಗಿ ಈ ಸಮಯದಲ್ಲಿ ಪಾಲಕ್ ಸೊಪ್ಪು ತಿಂದರೆ ಸಾಕಷ್ಟು ನೀರನ್ನು ಕುಡಿಯಿರಿ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...