Kannada Duniya

ಖರ್ಜೂರ ಸೇವನೆಯಿಂದ ಇಷ್ಟೆಲ್ಲಾ ಲಾಭವಿದೆ ಗೊತ್ತಾ…?


ಖರ್ಜೂರ ಸೇವಿಸುವುದರಿಂದ ಆರೋಗ್ಯಕ್ಕೆ ತುಂಬಾ ಲಾಭವಿದೆ. ರಕ್ತಹೀನತೆಯಿಂದ ಬಳಲುತ್ತಿರುವವರು, ಮಲಬದ್ಧತೆ ಸಮಸ್ಯೆ ಇರುವವರು ಇದನ್ನು ಸೇವಿಸುವುದರಿಂದ ಆರೋಗ್ಯಕರವಾದ ಪ್ರಯೋಜನವನ್ನು ಪಡೆಯಬಹುದು. ಇದರಲ್ಲಿ ನಾರಿನಾಂಶ ಕೂಡ ಹೆಚ್ಚಿದೆ. ಖರ್ಜೂರ ಸೇವಿಸುವುದರಿಂದ ಸಿಗುವ ಲಾಭಗಳೇನು ಎಂಬುದರ ಕುರಿತು ಇಲ್ಲಿದೆ ನೋಡಿ ಮಾಹಿತಿ.

ಎನರ್ಜಿಯನ್ನು ಹೆಚ್ಚಿಸುವಲ್ಲಿ ಖರ್ಜೂರ ಹೆಚ್ಚಿನ ಪಾತ್ರ ವಹಿಸುತ್ತದೆ. ಇದರಲ್ಲಿರುವ ಪೋಟ್ಯಾಶಿಯಂ ದೇಹಕ್ಕೆ ತುಂಬಾನೇ ಒಳ್ಳೆಯದು. ಪದೇ ಪದೇ ಕಾಫಿ ಕುಡಿಯುವುದಕ್ಕಿಂತ ಒಂದು ಖರ್ಜೂರ ಸೇವಿಸಿ ನೋಡಿ. ಇದರಿಂದ ನಿಮ್ಮ ಆರೊಗ್ಯ ಕೂಡ ಚೆನ್ನಾಗಿರುತ್ತದೆ.

ಮೂಳೆಯನ್ನು ಗಟ್ಟಿ ಮಾಡುವಲ್ಲಿ ಖರ್ಜೂರ ಪ್ರಮುಖ ಪಾತ್ರ ವಹಿಸುತ್ತದೆ. ಇದರಲ್ಲಿ ಮೆಗ್ನೇಷಿಯಂ, ಕಾಪರ್ ಇರುವುದರಿಂದ ಮೂಳೆಯನ್ನು ಸದೃಢಗೊಳಿಸುವಲ್ಲಿ ಸಹಕಾರಿಯಾಗಿದೆ.

ಇನ್ನು ಕೆಲವರಿಗೆ ನಿದ್ರೆಯ ಸಮಸ್ಯೆ ಇರುತ್ತದೆ. ಅಂತಹವರು ಮಲಗುವುದಕ್ಕೆ ಎರಡು ಗಂಟೆ ಮೊದಲು ಒಂದು ಖರ್ಜೂರವನ್ನು ಸೇವಿಸುವುದರಿಂದ ಚೆನ್ನಾಗಿ ನಿದ್ರಿಸಬಹುದಂತೆ.

ಕೊತ್ತಂಬರಿಯಿಂದ ತೂಕ ಇಳಿಸಿಕೊಳ್ಳಬಹುದೇ….?

ಕೊಲೆಸ್ಟ್ರಾಲ್ ಸಮಸ್ಯೆಯಿಂದ ಬಳಲುತ್ತಿರುವವರೂ ಖರ್ಜೂರ ಸೇವಿಸುವುದರಿಂದ ಆರೋಗ್ಯಕ್ಕೆ ತುಂಬಾ ಪ್ರಯೋಜನವಿದೆ.

ಇನ್ನು ಡಯೆಟ್ ಮಾಡುವವರು ಸಿಹಿ ತಿನ್ನಬೇಕು ಎಂಬ ಆಸೆ ಆದಾಗ ಒಂದು ಖರ್ಜೂರ ತಿಂದು ನೋಡಿ. ಇದು ದೇಹಕ್ಕೆ ಬೇಕಾದ ಶಕ್ತಿಯನ್ನು ನೀಡುತ್ತದೆ ಜೊತೆಗೆ ಸಿಹಿಯ ಬಯಕೆಯನ್ನು ತಣಿಸುತ್ತದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...