Kannada Duniya

ಕೆಲಸದ ಅವಧಿಯಲ್ಲಿ ನಿದ್ದೆ, ಸರಿಯೋ ತಪ್ಪೋ?

ಇತ್ತ ಇನ್ಫೋಸಿಸ್ ನ ಮಾಜಿ ಅಧ್ಯಕ್ಷ ನಾರಾಯಣ ಮೂರ್ತಿ ವಾರಕ್ಕೆ 70 ಗಂಟೆ ಕೆಲಸ ಮಾಡುವಂತೆ ಯುವಕರಿಗೆ ಕರೆ ನೀಡಿದ್ದರೆ, ಅತ್ತ ಕಚೇರಿ ಕೆಲಸದ ವೇಳೆ ನಿದ್ದೆ ಮಾಡುವುದು ಒಳ್ಳೆಯದೇ ಕೆಟ್ಟದ್ದೇ ಎಂಬ ಬಗ್ಗೆ ಸಂಶೋಧನೆಯೊಂದು ನಡೆದಿದೆ.

ಈ ಅಧ್ಯಯನದ ಪ್ರಕಾರ ಕಚೇರಿಯಲ್ಲಿ ವಿರಾಮದ ಸಮಯದಲ್ಲಿ ಅಥವಾ ಮಧ್ಯಾಹ್ನ ಊಟದ ಬಳಿಕ ಸಣ್ಣ ನಿದ್ದೆ ಮಾಡುವುದರಿಂದ ಅವರ ಆಯಾಸ ದೂರವಾಗುತ್ತದೆ ಹಾಗೂ ಕಾರ್ಯ ಸಾಮರ್ಥ್ಯ ಹೆಚ್ಚುತ್ತದೆ. ಇದರಿಂದ ಅವರ ಆರೋಗ್ಯವು ಉತ್ತಮಗೊಳ್ಳುತ್ತದೆ ಎಂಬುದನ್ನು ಈ ಸಮೀಕ್ಷೆ ಹೇಳಿದೆ.

ಜಪಾನ್ ಸೇರಿದಂತೆ ಕೆಲವು ರಾಷ್ಟ್ರಗಳಲ್ಲಿ ಕೆಲಸದ ವೇಳೆಯಲ್ಲಿ ಅಲ್ಪ ನಿದ್ರೆ ಮಾಡುವುದು ಸೇರಿದೆ. ಇದರಿಂದ ದಿನವಿಡೀ ಅನುಭವಿಸುವ ಒತ್ತಡದ ನಿವಾರಣೆಯಾಗುತ್ತದೆ. ಮತ್ತೆ ಮೊದಲಿನಿಂದ ಫ್ರೆಶ್ ಆಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ. ಇದರಿಂದ ಉತ್ಪಾದನೆಯ ಹೆಚ್ಚಾಗುತ್ತದೆ ಎಂಬುದನ್ನು ಈ ಅಧ್ಯಯನ ತಿಳಿಸಿದೆ.

ಅಚ್ಚರಿಯ ವಿಚಾರವೆಂದರೆ ಸಮೀಕ್ಷೆಗೆ ಒಳಗಾದವರು ಬಗ್ಗೆ ಶೇಕಡ 94 ರಷ್ಟು ಉದ್ಯೋಗಿಗಳು ಕೆಲಸದ ಸಮಯದಲ್ಲಿ ಸಣ್ಣ ನಿದ್ರೆ ತೆಗೆದುಕೊಳ್ಳಲು ಅವಶ್ಯಕ ಎಂಬುದನ್ನು ಒಪ್ಪಿಕೊಂಡಿದ್ದರೆ ಶೇಕಡ 3ರಷ್ಟು ಮಂದಿ ಮಾತ್ರ  ಇದರ ಅಗತ್ಯವಿಲ್ಲ ಎಂದಿದ್ದಾರೆ.

 


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...