Kannada Duniya

ಏನೇ ತಿಂದರೂ ‘ಅಸಿಡಿಟಿ ಸಮಸ್ಯೆ’ ಎನ್ನುವವರು ಈ ಟಿಪ್ಸ್ ಟ್ರೈ ಮಾಡಿ…!

ಪದೇ ಪದೇ ಅಸಿಡಿಟಿ ಸಮಸ್ಯೆ ನಿಮ್ಮನ್ನು ಕಾಡುತ್ತಿದೆಯೇ? ಚಿಂತೆ ಬಿಡಿ. ಈ ಕೆಲವು ವಸ್ತುಗಳನ್ನು ನಿತ್ಯ ನಿಮ್ಮ ಆಹಾರದಲ್ಲಿ ಸೇವಿಸುತ್ತಾ ಬನ್ನಿ. ಈ ಸಮಸ್ಯೆ ನಿಮ್ಮಿಂದ ಶಾಶ್ವತವಾಗಿ ದೂರವಾಗುವುದನ್ನು ನೀವೇ ನೋಡಿ.

ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ ಅಂಶ ಸಾಕಷ್ಟಿದೆ. ಇದು ಹೊಟ್ಟೆಯ ಒಳಪದರ ಹಾಗೂ ಅನ್ನನಾಳವನ್ನು ಸ್ವಚ್ಛವಾಗಿ ಇಟ್ಟುಕೊಳ್ಳುತ್ತದೆ. ಆಮ್ಲಾ ಪುಡಿಯನ್ನು ಸೇವಿಸುವುದರ ಮೂಲಕ, ನೆಲ್ಲಿಕಾಯಿ ಜ್ಯೂಸ್ ಕುಡಿಯುವ ಮೂಲಕ ಇಲ್ಲವೇ ಅಡುಗೆಗೆ ಇದನ್ನು ಬಳಸುವ ಮೂಲಕ ಇದರ ಲಾಭವನ್ನು ಪಡೆದುಕೊಳ್ಳಬಹುದು.

ಶುಂಠಿ ಜೀರ್ಣಕ್ರಿಯೆಯನ್ನು ಚುರುಕುಗೊಳಿಸುತ್ತದೆ, ಅಗತ್ಯ ಪೋಷಕಾಂಶಗಳನ್ನು ಹೀರಿಕೊಳ್ಳಲು ನೆರವಾಗುತ್ತದೆ ಮತ್ತು ಹೊಟ್ಟೆಯ ಹುಣ್ಣುಗಳಿಂದ ರಕ್ಷಣೆ ನೀಡುತ್ತದೆ. ಹಾಗಾಗಿ ನಿತ್ಯ ಅಡುಗೆಯಲ್ಲಿ ಒಂದಿಲ್ಲೊಂದು ರೂಪದಲ್ಲಿ ಶುಂಠಿ ಬಳಸಿ.

ಈ ವಸ್ತುಗಳನ್ನು ಅಪ್ಪಿತಪ್ಪಿಯೂ ನಿಮ್ಮ ಮನೆಯೊಳಗೆ ಇಟ್ಟುಕೊಳ್ಳಬೇಡಿ…!

ಏಲಕ್ಕಿ ಅಥವಾ ದಾಲ್ಚಿನಿ ಪುಡಿಗಳು ಹೊಟ್ಟೆಯ ಉರಿಯೂತವನ್ನು ಕಡಿಮೆ ಮಾಡುತ್ತದೆ ಮತ್ತು ಎದೆಉರಿಯಿಂದಲೂ ಮುಕ್ತಿ ನೀಡುತ್ತದೆ. ಹುಳಿ ಇಲ್ಲದ ತಣ್ಣನೆಯ ಮಜ್ಜಿಗೆ ಕುಡಿಯುವುದರಿಂದಲೂ ಗ್ಯಾಸ್ಟ್ರಿಕ್ ಸಮಸ್ಯೆಯನ್ನು ಕಡಿಮೆ ಮಾಡಿಕೊಳ್ಳಬಹುದು.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...