Kannada Duniya

ಕೆಟ್ಟ ಕೊಲೆಸ್ಟ್ರಾಲ್ ಮಟ್ಟ ತಗ್ಗಿಸುವ ಮನೆಮದ್ದುಗಳಿವು!

ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಲು ವೈದ್ಯರು ಸೂಚಿಸಿದ ಔಷಧಗಳ ಜೊತೆಗೆ ಮನೆಯಲ್ಲೇ ಇರುವ ಈ ಕೆಲವು ತರಕಾರಿಗಳನ್ನು ಹೀಗೆ ಬಳಸಿ ನೋಡಬಹುದು.

ಹಸಿಶುಂಠಿ ಹಾಗೂ ನಿಂಬೆ ಬೆರೆಸಿ ತಯಾರಿಸಿದ ಚಹಾ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಇದು ಕ್ರಮೇಣ ದೇಹ ತೂಕ ಇಳಿಕೆಗೂ ಕಾರಣವಾಗುತ್ತದೆ. ಒಂದು ಕಪ್ ನೀರನ್ನು ಚೆನ್ನಾಗಿ ಕುದಿಸಿ ಅದಕ್ಕೆ ಒಂದಿಂಚು ಗಾತ್ರದ ಶುಂಠಿಯನ್ನು ಜಜ್ಜಿ ಇಲ್ಲವೇ ತುರಿದು ಸೇರಿಸಿ. ಬಳಿಕ ಸೋಸಿ ನಿಂಬೆರಸ ಬೆರೆಸಿ. ಸಿಹಿ ಬೇಕಿದ್ದರೆ ಜೇನುತುಪ್ಪ ಬೆರೆಸಿ ಕುಡಿಯಬಹುದು.

ಬೆಳಿಗ್ಗೆ ಎದ್ದ ತಕ್ಷಣ ಅರ್ಧ ಇಂಚು ಗಾತ್ರದ ಶುಂಠಿ ತುಂಡನ್ನು ಬಾಯಿಯಲ್ಲಿ ಹಾಕಿಕೊಂಡು ಜಗಿಯಿರಿ. ಇದರಿಂದಲೂ ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣ ಕಡಿಮೆಯಾಗಲಿದೆ.

ಬೆಳ್ಳುಳ್ಳಿ ಹಾಗೂ ಶುಂಠಿಯನ್ನು ಪೇಸ್ಟ್ ಮಾಡಿ ಒಂದು ಕಪ್ ನೀರಿಗೆ ಸೇರಿಸಿ ಚೆನ್ನಾಗಿ ಕುದಿಸಿ. ಬಿಸಿ ಇರುವಂತೆಯೇ ಕುಡಿಯುವುದರಿಂದಲೂ ಕೊಲೆಸ್ಟ್ರಾಲ್ ಮಟ್ಟ ಕಡಿಮೆಯಾಗುತ್ತದೆ. ಇದು ರಕ್ತನಾಳಗಳನ್ನು ತೆರೆಯಲು ನೆರವಾಗುತ್ತವೆ.

 


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...