Kannada Duniya

ಎಷ್ಟೇ ತೊಳೆದರೂ ಪಾತ್ರೆ ಸ್ವಚ್ಛವಾಗುತ್ತಿಲ್ಲವೇ….? ಇಲ್ಲಿದೆ ನೋಡಿ ನಿಮ್ಮ ಸಮಸ್ಯೆಗೆ ಪರಿಹಾರ…!

ಅಯ್ಯೋ, ಅಡುಗೆ ಮನೆಯಲ್ಲಿ ಪಾತ್ರೆ ತೊಳೆಯುವ ಸೋಪು, ಲಿಕ್ವಿಡ್ ಗಳು ಒಂದೇ ದಿನದಲ್ಲಿ ಖಾಲಿಯಾಗಿವೆ, ಉಳಿದ ಪಾತ್ರೆಗಳನ್ನು ತೊಳೆಯುವುದು ಹೇಗೆ ಎಂಬ ಚಿಂತೆ ಬಿಡಿ. ಮನೆಯಲ್ಲೇ ಇರುವ ಈ ಕೆಲವು ವಸ್ತುಗಳು ನಿಮ್ಮ ಪಾತ್ರೆಗಳನ್ನು ಹೊಸದರಂತೆ ಮಾಡುತ್ತವೆ ಎಂಬುದನ್ನು ನೆನಪಿಡಿ.

ಅಡುಗೆ ಸೋಡಾವನ್ನು ಬಿಸಿನೀರಿಗೆ ಹಾಕಿ ಕಲಕಿ. ಈ ನೀರನ್ನು ನೀವು ತೊಳೆಯಬೇಕಿರುವ ಪಾತ್ರೆಗಳಿಗೆ ಸಿಂಪಡಿಸಿ. ಐದು ನಿಮಿಷ ಬಳಿಕ ಪಾತ್ರೆ ತೊಳೆದರೆ ಅಥವಾ ಸ್ಪಂಜಿನಿಂದ ಉಜ್ಜುತ್ತಾ ಬಂದರೆ ಎಲ್ಲವೂ ಹೊಸದರಂತೆ ಹೊಳೆಯುತ್ತದೆ.

ಅರ್ಧ ಕಪ್ ಆಪಲ್ ಸೈಡರ್ ವಿನೆಗರ್ ಗೆ ಒಂದು ಲೋಟ ನೀರು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಖಾಲಿಯಾದ ಲಿಕ್ವಿಡ್ ಬಾಟಲ್ ಗೆ ತುಂಬಿ. ಬಳಿಕ ತೊಳೆಯಬೇಕಿರುವ ಪಾತ್ರೆಗಳನ್ನು ಇದರ ನೆರವಿನಿಂದಲೇ ಸ್ವಚ್ಚಗೊಳಿಸಿ. ಈ ವೇಳೆ ಬಿಸಿನೀರು ಬಳಸಲು ಮರೆಯದಿರಿ. ಇದರೊಂದಿಗೆ ನಿಂಬೆರಸ ಬೆರೆಸಿದರೆ ಪಾತ್ರೆಗಳು ಪಳಪಳ ಹೊಳೆಯುವುದು ನಿಶ್ಚಿತ.

ಜ್ವರವಿಲ್ಲದೇ ನಿಮ್ಮ ದೇಹದಲ್ಲಿ ನಡುಕ ಕಂಡುಬಂದರೆ ಅದಕ್ಕೆ ಇದೇ ಕಾರಣವಂತೆ….!

ಹಿಂದಿನ ಕಾಲದಲ್ಲಿ ಪಾತ್ರೆಗಳನ್ನು ಬೂದಿಯ ನೆರವಿನಿಂದ ಸ್ವಚ್ಛಗೊಳಿಸುತ್ತಿದ್ದರು ಎಂಬುದು ನಿಮಗೆ ತಿಳಿದಿದೆಯೇ? ಹೌದು ಬೂದಿ ಕೂಡಾ ಪಾತ್ರೆಗಳನ್ನು ಹೊಚ್ಚ ಹೊಸದರಂತೆ ಮಾಡಬಲ್ಲುದು. ಇದನ್ನು ಹಚ್ಚಿ ಪಾತ್ರೆ ತೊಳೆಯುವ ಬ್ರಶ್ ನಿಂದ ಉಜ್ಜಿದರೆ ಸಾಕು.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...