Kannada Duniya

ಈ ಟಿಪ್ಸ್ ಟ್ರೈ ಮಾಡಿ ನೋಡಿ ಕಾಲು ನೋವು ನಿವಾರಣೆಗೆ…!

ಕಾಲು ನೋವು ಇದು ಹೆಚ್ಚಿನವರನ್ನು ಕಾಡುತ್ತಿರುತ್ತದೆ. ಅಪಘಾತ, ವಿಪರೀತ ದೈಹಿಕ ತಾಲೀಮು, ಸರಿಯಾದ ಪೋಷಕಾಂಶಭರಿತ ಸೇವನೆ ಮಾಡದೇ ಇರುವುದು, ಹೆಚ್ಚು ನಿಂತುಕೊಂಡೇ ಕೆಲಸ ಮಾಡುವುದು ಇತ್ಯಾದಿ ಕಾರಣಗಳಿಂದ ಕಾಲು ನೋವು ಶುರುವಾಗುತ್ತದೆ. ಕೆಲವೊಂದು ಮನೆಮದ್ದುಗಳ ಮೂಲಕ ಇದನ್ನು ಸುಲಭದಲ್ಲಿ ನಿವಾರಿಸಿಕೊಳ್ಳಬಹುದು.

ಕೋಲ್ಡ್ ಕಂಪ್ರೆಸ್: ವರ್ಕ್ ಔಟ್ ಅಥವಾ ಗಾಯಗಳಾಗಿ ನೋವು ಉಂಟಾಗಿದ್ದರೆ ಒಂದು ಬಟ್ಟೆಗೆ ಐಸ್ ಕ್ಯೂಬ್ ಹಾಕಿ 10 ರಿಂದ 15 ನಿಮಿಷಗಳ ಕಾಲ ನಿಧಾನಕ್ಕೆ ಮಸಾಜ್ ಮಾಡಿ.
ಹೆಚ್ಚು ನೀರು ಸೇವಿಸಿ: ಸರಿಯಾಗಿ ನೀರು ಕುಡಿಯದೇ ಇರುವುದು ಕೂಡ ಸ್ನಾಯು ಸೆಳೆತ, ಕಾಲು ನೋವಿಗೆ ಕಾರಣವಾಗುತ್ತದೆ. ಹಾಗಾಗಿ ಸರಿಯಾಗಿ ನೀರು ಕುಡಿಯಿರಿ. ಆಲ್ಕೋಹಾಲ್, ಕಾಫಿಯನ್ನು ಆದಷ್ಟು ಕಡಿಮೆ ಮಾಡಿ.

ಸೊಂಟನೋವನ್ನು ನಿವಾರಿಸಲು ಈ ಯೋಗಾಸನಗಳನ್ನು ಮಾಡಿ

ವಾಕಿಂಗ್: ಕೆಲವೊಮ್ಮೆ ಒಂದೇ ಕಡೆ ಕುಳಿತು ಕೆಲಸ ಮಾಡುವುದರಿಂದ ಕೂಡ ವಿಪರೀತ ಕಾಲು ನೋವಿನ ಸಮಸ್ಯೆ ಕಾಡುತ್ತದೆ. ಹಾಗಾಗಿ ಬೆಳಿಗ್ಗೆ, ಸಂಜೆ 20 ನಿಮಿಷಗಳ ಕಾಲ ನಿಧಾನಕ್ಕೆ ವಾಕಿಂಗ್ ಮಾಡಿ. ಇದರಿಂದ ರಕ್ತಸಂಚಾರ ಚೆನ್ನಾಗಿ ಆಗುತ್ತದೆ.

ಆ್ಯಪಲ್ ಸೈಡರ್ ವಿನೇಗರ್: ಬೆಳಿಗ್ಗೆ ಖಾಲಿ ಹೊಟ್ಟೆಗೆ 1 ಟೇಬಲ್ ಸ್ಪೂನ್ ಆ್ಯಪಲ್ ಸೈಡರ್ ವಿನೇಗರ್ ಅನ್ನು ಕುಡಿಯುವುದರಿಂದ ಕೂಡ ಕಾಲು ನೋವು ಕಡಿಮೆಯಾಗುತ್ತದೆ. ಇನ್ನು ನೀವು ಸ್ನಾನ ಮಾಡುವ ನೀರಿಗೆ ಇದನ್ನು 1 ಚಮಚ ಹಾಕಿ ಮಿಕ್ಸ್ ಮಾಡಿಕೊಂಡು ಬಳಿಕ ಸ್ನಾನ ಮಾಡುವುದರಿಂದ ಕೂಡ ನೋವು ಉಪಶಮನವಾಗುತ್ತದೆ.

ಸರಿಯಾದ ಆಹಾರ: ಪೊಟ್ಯಾಷಿಯಂ ಹಾಗೂ ಮೆಗ್ನೇಷಿಯಂ ಹೇರಳವಾಗಿರುವ ಆಹಾರವನ್ನು ಸೇವಿಸಿ. ಬಾಳೆಹಣ್ಣು, ಮೀನು, ಮೊಸರು, ಖರ್ಜೂರ, ಒಣದ್ರಾಕ್ಷಿ, ಟೊಮೆಟೊ ಜ್ಯೂಸ್, ಗೆಣಸು ಇವುಗಳನ್ನು ಹೆಚ್ಚು ಸೇವಿಸಿ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...