Kannada Duniya

ಇವೆರಡರಲ್ಲಿ ತೂಕ ಇಳಿಸಲು ಯಾವುದು ಉತ್ತಮ- ಜೇನುತುಪ್ಪ ಅಥವಾ ಬೆಲ್ಲ….?

ನಮ್ಮ ಕೆಟ್ಟ ಜೀವನಶೈಲಿ ಮತ್ತು ಆಹಾರ ಪದ್ಧತಿಯಿಂದ ಹೆಚ್ಚಿನ ಜನರು ತೂಕ ಹೆಚ್ಚಳ ಸಮಸ್ಯೆಗೆ ಒಳಗಾಗುತ್ತಿದ್ದಾರೆ. ಹಾಗಾಗಿ ತೂಕ ಇಳಿಸಲು ಆರೋಗ್ಯಕರವಾದ ಆಹಾರ ಪದ್ಧತಿಯನ್ನು ಅನುಸರಿಸಿ. ಹಾಗಾದ್ರೆ ನೀವು ತೂಕ ಇಳಿಸಿಕೊಳ್ಳಲು ಜೇನುತುಪ್ಪ ಅಥವಾ ಬೆಲ್ಲ ಇವೆರಡರಲ್ಲಿ ಯಾವುದು ಉತ್ತಮ ಎಂಬುದನ್ನು ತಿಳಿದುಕೊಳ್ಳಿ.

ಜೇನುತುಪ್ಪ ನೈಸರ್ಗಿಕ ಸಿಹಿಕಾರವಾಗಿದೆ. ಇದು ತೂಕ ನಷ್ಟಕ್ಕೆ ಸಹಕಾರಿಯಾಗಿದೆ. ಇದು ಹಲವು ಆರೋಗ್ಯ ಪ್ರಯೋಜನವನ್ನು ಹೊಂದಿದ್ದು, ದೇಹಕ್ಕೆ ಪ್ರಯೋಜನಕಾರಿಯಾಗಿದೆ. ಇದರಲ್ಲಿ ಆ್ಯಂಟಿ ಆಕ್ಸಿಡೆಂಟ್ ಗಳು ಸಮೃದ್ಧವಾಗಿವೆ. ಇದು ದೇಹವನ್ನು ನಿರ್ವಿಷಗೊಳಿಸಲು ಸಹಾಯ ಮಾಡುತ್ತವೆ. ಉರಿಯುತದ ಗುಣಲಕ್ಷಣಗಳನ್ನು ಹೊಂದಿದೆ.

ಹಾಗೇ ಬೆಲ್ಲ ಕೂಡ ನೈಸರ್ಗಿಕ ಸಿಹಿಯನ್ನು ಹೊಂದಿದೆ. ಇದು ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ ಅನ್ನು ಹೊಂದಿದೆ. ಇದು ಮಧುಮೇಹ ಸಮಸ್ಯೆ ಇರುವವರಿಗೆ ಪ್ರಯೋಜನಕಾರಿಯಾಗಿದೆ. ಇದರಲ್ಲಿ ಕಬ್ಬಿಣ, ಪೊಟ್ಯಾಶಿಯಂ, ಮೆಗ್ನಿಶಿಯಂ, ಹಾಗೇ ಖನಿಜಗಳು ಸಮೃದ್ಧವಾಗಿವೆ. ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಹಿಮೋಗ್ಲೋಬಿನ್ ಅನ್ನು ಹೆಚ್ಚಿಸುತ್ತದೆ. ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸುತ್ತದೆ.

Honey for hair problems: ಚಳಿಗಾಲದಲ್ಲಿ ಕೂದಲು ಉದುರುವ ಸಮಸ್ಯೆಯಿಂದ ನೀವು ಬಳಲುತ್ತಿದ್ದೀರಾ…?

ಹಾಗಾಗಿ ತೂಕ ಇಳಿಸಲು ಬೆಲ್ಲ ಮತ್ತು ಜೇನುತುಪ್ಪ ಎರಡೂ ಉತ್ತಮ. ಎರಡರಲ್ಲೂ ಕ್ಯಾಲೋರಿ ಕಡಿಮೆ ಇದೆ. ಆದರೆ ತೂಕ ಇಳಿಸಲು ಎರಡನ್ನೂ ಸೀಮಿತ ಪ್ರಮಾಣದಲ್ಲಿ ಸೇವಿಸಿ.

 


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...