Kannada Duniya

ಆಯುರ್ವೇದದ ಈ ಸಲಹೆ ಪಾಲಿಸಿ ತೂಕವನ್ನು ನಿಯಂತ್ರಿಸಲು….!

ಆರೋಗ್ಯಕ್ಕೆ ಸಂಬಂಧಿಸಿದ ವಿವಿಧ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಆಯುರ್ವೇದದಲ್ಲಿ ನೈಸರ್ಗಿಕವಾದ ಗಿಡಮೂಲಿಕೆಗಳನ್ನು ಔಷಧವಾಗಿ ಬಳಸಲಾಗುತ್ತದೆ.

ಆಯುರ್ವೇದದ ಔಷಧಿಗಳು ಪೋಷಕಾಂಶಗಳಿಂದ ತುಂಬಿರುತ್ತದೆ, ಕೊಬ್ಬು ಕಡಿಮೆ ಇರುತ್ತದೆ. ಇದು ದೇಹವನ್ನು ನಿರ್ವಿಷಗೊಳಿಸುತ್ತದೆ. ಚಯಾಪಚಯ ಕ್ರಿಯೆಯನ್ನು ವೇಗಗೊಳಿಸುತ್ತದೆ. ಹಾಗಾಗಿ ತೂಕವನ್ನು ನಿಯಂತ್ರಿಸಲು ಆಯುರ್ವೇದದ ಈ ಸಲಹೆ ಪಾಲಿಸಿ.

-ರಾತ್ರಿಯ ಬದಲು ಹಗಲಿನಲ್ಲಿ ಆರೋಗ್ಯಕರ ಮತ್ತು ಪೂರ್ಣ ಊಟವನ್ನು ಸೇವಿಸುವಂತೆ ಆಯುರ್ವೇದ ಸಲಹೆ ನೀಡುತ್ತದೆ. ಹಗಲಿನಲ್ಲಿ ದೇಹ ಹೆಚ್ಚು ಕಾರ್ಯ ನಿರ್ವಹಿಸುತ್ತದೆ. ಹಾಗಾಗಿ ಹೆಚ್ಚು ಕ್ಯಾಲೋರಿ ಆಹಾರ ಸೇವಿಸಿದರೆ ಅದು ಬೇಗ ಜೀರ್ಣವಾಗುತ್ತದೆ. ಆದರೆ ರಾತ್ರಿ ಕಡಿಮೆ ಕ್ಯಾಲೋರಿ ಆಹಾರ ಸೇವಿಸಿ.

ತೂಕ ಇಳಿಸಲು ಪ್ರತಿದಿನ ಕೋಕೋ ಪೌಡರ್ ಅನ್ನು ಎಷ್ಟು ಪ್ರಮಾಣದಲ್ಲಿ ಸೇವಿಸಬೇಕು ಗೊತ್ತಾ?

-ತೂಕ ನಷ್ಟವಾಗಲು ಆಯುರ್ವೇದದಲ್ಲಿ 2-3 ಲೀಟರ್ ಬೆಚ್ಚಗಿನ ನೀರನ್ನು ಕುಡಿಯಲು ಸಲಹೆ ನೀಡಲಾಗುತ್ತದೆ. ಇದು ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ.

-ಕಷಾಯ ಸೇವಿಸುವುದರಿಂದ ದೇಹದಲ್ಲಿನ ದ್ರವ ಸೇವನೆ ಹೆಚ್ಚಾಗುತ್ತದೆ. ಅಲ್ಲದೇ ತೂಕವನ್ನು ವೇಗವಾಗಿ ಕಡಿಮೆ ಮಾಡುತ್ತದೆ. ಹಾಗಾಗಿ ಮೆಂತ್ಯಬೀಜಗಳನ್ನು ಹುರಿದು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೀರಿನ ಜೊತೆಗೆ ಸೇವಿಸಿ. ಮೆಂತ್ಯದಲ್ಲಿ ಫೈಬರ್ ಹೆಚ್ಚಾಗಿದ್ದು, ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ಮಲಬದ್ಧತೆಯನ್ನು ತಡೆಯುತ್ತದೆ.

-ತೂಕ ಇಳಿಸಿಕೊಳ್ಳಲು ಮನೆಯಲ್ಲಿಯೇ ಬೇಯಿಸಿದ ಸರಳ ಆಹಾರವನ್ನು ಸೇವಿಸಿ. ಮನೆಯಲ್ಲಿ ತಯಾರಿಸಿದ ಆಹಾರವು ಕಡಿಮೆ ಕೊಬ್ಬಿನಾಂಶವನ್ನು ಹೊಂದಿರುತ್ತದೆ. ಇದು ಮಾರುಕಟ್ಟೆಯ ಆಹಾರಕ್ಕಿಂತ ಆರೋಗ್ಯಕರವಾಗಿರುತ್ತದೆ.

-ಆರೋಗ್ಯಕರವಾಗಿ, ಸದೃಢವಾಗಿರಲು ಆರೋಗ್ಯಕರವಾದ ಆಹಾರದ ಜೊತೆಗೆ ವ್ಯಾಯಾಮ, ಯೋಗಗಳನ್ನು ಮಾಡಿ. ಇವು ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...