Kannada Duniya

ಅತಿಯಾಗಿ ತಿನ್ನುವುದನ್ನು ತಪ್ಪಿಸಲು ಈ ಟಿಪ್ಸ್ ಫಾಲೋ ಮಾಡಿ….!

ಕೆಲವರಿಗೆ ಹೆಚ್ಚು ಹಸಿವಾಗುತ್ತದೆ. ಹಾಗಾಗಿ ಅವರು ಅತಿಯಾಗಿ ಆಹಾರವನ್ನು ಸೇವಿಸುತ್ತಾರೆ. ಇದರಿಂದ ಅವರ ದೇಹದ ತೂಕ ಹೆಚ್ಚಾಗುತ್ತದೆ. ಇದು ಅವರ ದೇಹದ ಸೌಂದರ್ಯವನ್ನು ಕೆಡಿಸುತ್ತದೆ. ಹಾಗಾಗಿ ನೀವು ಅತಿಯಾಗಿ ತಿನ್ನುವುದನ್ನು ತಪ್ಪಿಸಲು ನಿಮ್ಮ ಹಸಿವನ್ನು ಹೀಗೆ ನಿಯಂತ್ರಿಸಿ.

ನೀವು ಬೇಗ ಬೇಗನೆ ಆಹಾರ ಸೇವಿಸುವುದನ್ನು ತಪ್ಪಿಸಿ. ಆಹಾರವನ್ನು ನಿಧಾನವಾಗಿ ಸೇವಿಸಿ. ಇದರಿಂದ ಆಹಾರ ನಿಧಾನವಾಗಿ ಜೀರ್ಣವಾಗುತ್ತದೆ.

ಫೈಬರ್ ಭರಿತವಾದ ಆಹಾರವನ್ನು ಸೇವಿಸಿ. ಇದರಿಂದ ಹೊಟ್ಟೆ ದೀರ್ಘಕಾಲ ತುಂಬಿರುತ್ತದೆ. ಇದರಿಂದ ಹಸಿವು ಕಡಿಮೆಯಾಗುತ್ತದೆ.

ಪ್ರತಿ ಗಂಟೆಗೊಮ್ಮೆ ತಿನ್ನುವುದನ್ನು ತಪ್ಪಿಸಿ. ಆಹಾರ ಜೀರ್ಣವಾಗಲು 3-4 ಗಂಟೆ ಬೇಕು. ಹಾಗಾಗಿ 4-5 ಗಂಟೆಗಳ ನಂತರ ಆಹಾರ ಸೇವಿಸಿ.

ಚಿಕನ್ ಮಂಚೂರಿಯಾ ತುಂಬಾ ರುಚಿಯಾಗಿರುತ್ತದೆ. ನೀವೂ ಒಮ್ಮೆ ಟ್ರೈ ಮಾಡಿ ನೋಡಿ..!

ನೀವು ತರಕಾರಿ, ಹಣ್ಣುಗಳು, ಸಲಾಡ್ ಮುಂತಾದ ಉತ್ತಮ ಆಹಾರವನ್ನು ಸೇವಿಸಿ. ಇದರಿಂದ ದೇಹಕ್ಕ ಅಗತ್ಯವಾದ ಪೋಷಕಾಂಶ ಸಿಗುತ್ತದೆ. ಕೊಬ್ಬು ಸಂಗ್ರಹವಾಗುವುದಿಲ್ಲ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...