Kannada Duniya

ನೀವು ಲೆಹಂಗಾ ಧರಿಸಿದಾಗ ಹೊಟ್ಟೆಯ ಕೊಬ್ಬು ಕಾಣಿಸಿಕೊಂಡರೆ ಅದನ್ನು ಮರೆಮಾಚಲು ಈ ಸಲಹೆಗಳನ್ನು ಪಾಲಿಸಿ….!

ಪ್ರತಿ ಮಹಿಳೆಯರು ಸುಂದರವಾಗಿ ಕಾಣಲು ಪ್ರಯತ್ನಿಸುತ್ತಾರೆ. ಆದರೆ ಹಬ್ಬ ಹರಿದಿನಗಳಲ್ಲಿ, ಮದುವೆ ಸಮಾರಂಭಗಳಲ್ಲಿ ಎಲ್ಲರ ಮನಸ್ಸು ಲೆಹಂಗಾ ಧರಿಸಲು ಬಯಸುತ್ತದೆ. ಇದನ್ನು ಸುಲಭವಾಗಿ ಧರಿಸಬಹುದು. ಆದರೆ ಹೊಟ್ಟೆಯ ಕೊಬ್ಬಿನಿಂದ ಕೆಲವರು ಲೆಹಂಗಾ ಧರಿಸಲು ಹಿಂಜರಿಯುತ್ತಾರೆ.

ಹಾಗಾಗಿ ಲೆಹಂಗಾ ಧರಿಸಿದಾಗ ಹೊಟ್ಟೆಯ ಕೊಬ್ಬು ಕಾಣಿಸಿಕೊಂಡರೆ ಅದನ್ನು ಮರೆಮಾಚಲು ಈ ಸಲಹೆ ಪಾಲಿಸಿ.

ಶೇಪ್ವೇರ್ ನಿಮ್ಮ ಶೈಲಿಯನ್ನು ಸಂಪೂರ್ಣವಾಗಿ ಬದಲಾಯಿಸಬಹುದು, ಚಳಿಗಾಲವಾಗಲಿ ಅಥವಾ ಬೇಸಿಗೆಯಾಗಲಿ ಅವುಗಳನ್ನು ನಿಮ್ಮ ಡ್ರೆಸ್ ಅಡಿಯಲ್ಲಿ ಧರಿಸುವುದರಿಂದ ನಿಮ್ಮ ಶೇಪ್ ಚೆನ್ನಾಗಿ ಕಾಣಿಸುತ್ತದೆ. ಇದು ಹೊಟ್ಟೆಯ ರೋಲ್ ಅನ್ನು ಮರೆಮಾಡಲು ಸಹಾಯ ಮಾಡುತ್ತದೆ.

ನಿಮ್ಮ ಹೊಟ್ಟೆಯ ಕೊಬ್ಬನ್ನು ಮರೆಮಾಚಲು ನೀವು ಬಯಸಿದರೆ ಪೂರ್ಣ ಕವರೇಜ್ ಬ್ಲೌಸ್ ಮತ್ತು ಚೋಲಿ ಸ್ಟೈಲ್ ಬ್ಲೌಸ್ ಅನ್ನು ಆಯ್ಕೆ ಮಾಡಿ. ಪೆಪ್ಲಮ್ ಶೈಲಿಯ ಬ್ಲೌಸ್ ಗಳು ಸಹ ಬಹಳ ಆಕರ್ಷಕವಾಗಿ ಕಾಣುತ್ತದೆ. ಇದು ಹೊಟ್ಟೆಯ ಕೊಬ್ಬನ್ನು ಮರೆಮಾಚುತ್ತದೆ.

ಮೇಕಪ್ ಮಾಡುವ ಮೊದಲು ಈ ವಸ್ತುಗಳನ್ನು ಮುಖಕ್ಕೆ ಹಚ್ಚಿದರೆ ಚರ್ಮ ತೇವಾಂಶಧಿಂದ ಹೊಳೆಯುತ್ತದೆ

ನೀವು ಸ್ಲಿಮ್ ಫಿಗರ್ ಹೊಂದಲು ಬಯಸಿದರೆ, ದೊಡ್ಡ ಹೂವುಗಳು , ದೊಡ್ಡದಾಗಿ ಕಾಣುವಂತ ಫ್ರಿಂಟ್ ಗಳು, ಪ್ಯಾಟರ್ನ್ ಗಳು ಮತ್ತು ಕಸೂತಿ ಇರುವ ಬಟ್ಟೆಗಳನ್ನು ಧರಿಸುವುದು ಉತ್ತಮ.

ನಿಮ್ಮ ಹೊಟ್ಟೆಯ ಕೊಬ್ಬನ್ನು ಮರೆಮಾಚಲು ನಿಮ್ಮ ಲೆಹೆಂಗಾದೊಂದಿಗೆ ಎರಡು ತಿಳಿ ಬಣ್ಣದ ದುಪ್ಪಟಾಗಳನ್ನು ಧರಿಸಿ. ಇದು ನಿಮ್ಮ ಒಟ್ಟಾರೆ ನೋಟವನ್ನು ಹೆಚ್ಚಿಸುವುದಲ್ಲದೇ ಹೊಟ್ಟೆಯ ಕೊಬ್ಬನ್ನು ಮರೆಮಾಚುತ್ತದೆ. ಆದರೆ ಕಡಿಮೆ ಕಸೂತಿ ಇರಬೇಕು.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...