Kannada Duniya

ಮಕ್ಕಳು ಪಾಲಕ್ ಸೊಪ್ಪು ತಿನ್ನಲು ಇಷ್ಟಪಡದಿದ್ದರೆ ಪಾಲಕ್ ರೈಸ್ ಮಾಡಿಕೊಡಿ…!

ಪಾಲಕ್ ಸೊಪ್ಪು ಆರೋಗ್ಯಕ್ಕೆ ತುಂಬಾ ಉತ್ತಮ. ಇದು ಕಬ್ಬಿಣಾಂಶದಿಂದ ಕೂಡಿದೆ. ಇದನ್ನು ಸೇವಿಸಿದರೆ ರಕ್ತ ಹೆಚ್ಚಾಗುತ್ತದೆ. ಆದರೆ ಮಕ್ಕಳು ಪಾಲಕ್ ಸೊಪ್ಪನ್ನು ತಿನ್ನಲು ಇಷ್ಟಪಡುವುದಿಲ್ಲ. ಹಾಗಾಗಿ ಮಕ್ಕಳಿಗೆ ಪಾಲಕ್ ರೈಸ್ ತಯಾರಿಸಿ ನೀಡಿ.

ಬೇಕಾಗುವ ಸಾಮಾಗ್ರಿಗಳು : ಬಾಸ್ಮತಿ ಅಕ್ಕಿ, ತಾಜಾ ಪಾಲಕ್ ಸೊಪ್ಪು, ಆಲೂಗಡ್ಡೆ, ಹಸಿಮೆಣಸಿನಕಾಯಿ, ಈರುಳ್ಳಿ, ಬೆಳ್ಳುಳ್ಳಿ, ಗರಂ ಮಸಾಲ, ಅರಿಶಿನ, ದನಿಯಾ ಪುಡಿ, ಮೆಣಸಿನಕಾಯಿ ಪುಡಿ, ಇಂಗು, ಉಪ್ಪು, ಕ್ಯಾರೆಟ್, ಬೀನ್ಸ್.

ಮಾಡುವ ವಿಧಾನ : ಮೊದಲು ಬಾಸ್ಮತಿ ಅಕ್ಕಿಯನ್ನು ಬೇಯಿಸಿಕೊಳ್ಳಿ. ಮಿಕ್ಸಿಯಲ್ಲಿ ಪಾಲಕ್ ಸೊಪ್ಪು ಮತ್ತು ಉಪ್ಪು ಹಾಕಿ ರುಬ್ಬಿ ದಪ್ಪವಾದ ಪೇಸ್ಟ್ ತಯಾರಿಸಿ. ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಅದಕ್ಕೆ ಜೀರಿಗೆ, ಬೆಳ್ಳುಳ್ಳಿ ಮತ್ತು ಹಸಿಮೆಣಸಿನಕಾಯಿ ಹಾಕಿ ಹುರಿಯಿರಿ. ನಂತರ ಸಣ್ಣದಾಗಿ ಹೆಚ್ಚಿದ ಈರುಳ್ಳಿ ಹಾಕಿ ಕೆಂಪಾಗುವವರೆಗೂ ಹುರಿಯಿರಿ. ಬಳಿಕ ಅದಕ್ಕೆ ಆಲೂಗಡ್ಡೆ, ಕ್ಯಾರೆಟ್, ಬೀನ್ಸ್ ಹಾಕಿ ಬೇಯಿಸಿ. ನಂತರ ಗರಂ ಮಸಾಲ, ಅರಿಶಿನ, ದನಿಯಾ ಪುಡಿ, ಮೆಣಸಿನಕಾಯಿ ಪುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಕೊನೆಯಲ್ಲಿ ಪಾಲಕ್ ಸೊಪ್ಪಿನ ಪೇಸ್ಟ್ ಅನ್ನು ಸೇರಿಸಿ ಹಸಿ ವಾಸನೆ ಹೋಗುವವರೆಗೂ ಬೇಯಿಸಿ.ಬಾಸ್ಮತಿ ಅನ್ನ ಮತ್ತು ರುಚಿಗೆ ತಕಷ್ಟು ಉಪ್ಪು ಸೇರಿಸಿದರೆ ಪಾಲಕ್ ರೈಸ್ ರೆಡಿ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...