Kannada Duniya

ಬಟಾಣಿ ಸೂಪ್ ತಯಾರಿಸುವುದು ಹೇಗೆ ಗೊತ್ತಾ….?

ಚಳಿಗಾಲದಲ್ಲಿ ಸೂಪ್ ಕುಡಿಯುವ ಮಜಾನೆ ಬೇರೆ. ತರಕಾರಿ ಸೂಪ್ ತುಂಬಾ ರುಚಿಕರವಾಗಿರುತ್ತದೆ. ಸೂಪ್ ಕುಡಿಯುವುದರಿಂದ ತೂಕ ಕಡಿಮೆಯಾಗುವುದು ಮಾತ್ರವಲ್ಲ ದೇಹವು ಬಿಸಿಯಾಗಿರುತ್ತದೆ. ಹಾಗಾಗಿ ಚಳಿಗಾಲದಲ್ಲಿ ರುಚಿಕರವಾದ ಬಟಾಣಿ ಸೂಪ್ ತಯಾರಿಸಿ ಕುಡಿಯಿರಿ.

ಬೇಕಾಗುವ ಸಾಮಾಗ್ರಿಗಳು :
2 ಕಪ್ ಹಸಿರು ಬಟಾಣಿ, 2 ಕಪ್ ಪಾಲಕ್ ಸೊಪ್ಪು, 1 ಈರುಳ್ಳಿ, 4 ಲವಂಗ ಬೆಳ್ಳುಳ್ಳಿ, 1 ಸಣ್ಣ ತುಂಡು ಶುಂಠಿ, 2 ಹಸಿರು ಮೆಣಸಿನಕಾಯಿ, ½ ಚಮಚ ಜೀರಿಗೆ, 2 ಲವಂಗದೆಲೆ, 1 ಏಲಕ್ಕಿ , 1 ತುಂಡು ದಾಲ್ಚಿನ್ನಿ, ರುಚಿಗೆ ಉಪ್ಪು, ಅಗತ್ಯವಿರುವಷ್ಟು ಎಣ್ಣೆ.

ಮಾಡುವ ವಿಧಾನ : ಮಿಕ್ಸಿಯಲ್ಲಿ ಶುಂಠಿ, ಬೆಳ್ಳುಳ್ಳಿ ಮತ್ತು ಹಸಿರು ಮೆಣಸಿನಕಾಯಿಯನ್ನು ರುಬ್ಬಿ ಪೇಸ್ಟ್ ತಯಾರಿಸಿ. ಹಾಗೇ ಬಟಾಣಿ ಮತ್ತು ಪಾಲಕ್ ಸೊಪ್ಪನ್ನು ರುಬ್ಬಿ ಪೇಸ್ಟ್ ತಯಾರಿಸಿ. ಮಧ್ಯಮ ಉರಿಯಲ್ಲಿ ಬಾಣಲೆ ಬಿಸಿ ಮಾಡಿ ಎಣ್ಣೆ ಹಾಕಿ ಅದಕ್ಕೆ ಜೀರಿಗೆ, ಏಲಕ್ಕಿ, ದಾಲ್ಚಿನ್ನಿ ಮತ್ತು ಲವಂಗದೆಲೆಗಳನ್ನು ಹಾಕಿ ಫ್ರೈ ಮಾಡಿ. ಜೀರಿಗೆ ಸಿಡಿದ ಬಳಿಕ ಈರುಳ್ಳಿ ಹಾಕಿ ಫ್ರೈ ಮಾಡಿ.

ಬಟರ್ ಚಿಕನ್ ಪಾಸ್ತಾ ತಯಾರಿಸುವುದು ಹೇಗೆ ಗೊತ್ತಾ…?

ಈರುಳ್ಳಿ ಕೆಂಪಾದ ಬಳಿಕ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ. ನಂತರ ಬಟಾಣಿ ಮತ್ತು ಪಾಲಕ್ ಸೊಪ್ಪಿನ ಪೇಸ್ಟ್ ಹಾಕಿ 5 ನಿಮಿಷ ಬೇಯಿಸಿ. ಅಗತ್ಯವಿರುವಷ್ಟು ನೀರು ಮತ್ತು ಉಪ್ಪನ್ನು ಸೇರಿಸಿ. 3 ನಿಮಿಷಗಳ ಕಾಲ ಕುದಿಸಿದರೆ ಬಟಾಣಿ ಸೂಪ್ ರೆಡಿ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...