Kannada Duniya

ಗರಿ ಗರಿಯಾದ ಆಲೂಗಡ್ಡೆ  ಬೈಟ್ಸ್ ….!

ಮಕ್ಕಳಿಗೆ ಮನೆಯ ತಿಂಡಿಗಿಂತ ಹೊರಗಡೆ ಸಿಗುವ  ಅಂಗಡಿ ತಿಂಡಿಗಳೇ ಹೆಚ್ಚು ಪ್ರಿಯವಾಗುತ್ತೆ ಎನ್ನುವುದು ಎಲ್ಲಾ ತಾಯಂದಿರ ದೂರು. ದಿನಾ ಇಡ್ಲಿ, ದೋಸೆ ತಿಂದು ತಿಂದು ಬೇಜಾರಾದ ಮಕ್ಕಳಿಗೆ ಇಲ್ಲಿ ಆಲೂಗಡ್ಡೆ ಬಳಸಿ ಮಾಡಬಹುದಾದ ಒಂದು ಸ್ನಾಕ್ಸ್ ರೆಸಿಪಿ ಇದೆ. ರಜೆಯ ದಿನಾ ಅವರಿಗೆ ಮಾಡಿಕೊಟ್ಟರೆ ಖುಷಿಯಿಂದ ತಿನ್ನುತ್ತಾರೆ.

ಬೇಕಾಗುವ ಸಾಮಗ್ರಿಗಳು

1 ಸ್ಪೂನ್-ಚಿಕ್ಕದಾಗಿ ಕತ್ತರಿಸಿದ ಬೆಳ್ಳುಳ್ಳಿ , 3 ದೊಡ್ಡ ಆಲೂಗಡ್ಡೆ, 1 ಟೀ ಸ್ಪೂನ್- ಖಾರದ ಪುಡಿ, 2 ಟೇಬಲ್ ಸ್ಪೂನ್ ಅಕ್ಕಿ ಹಿಟ್ಟು, ರುಚಿಗೆ ತಕ್ಕಷ್ಟು-ಉಪ್ಪು, 1 ಟೇಬಲ್ ಸ್ಪೂನ್ –ಹಸಿ ಬಟಾಣಿ.

ಮಾಡುವ ವಿಧಾನ

ಆಲೂಗಡ್ಡೆಯನ್ನು ಚೆನ್ನಾಗಿ ಬೇಯಿಸಿಕೊಂಡು ಸಿಪ್ಪೆ ತೆಗೆದು ಹಿಸುಕಿಕೊಳ್ಳಿ. ಅದಕ್ಕೆ ಖಾರದ ಪುಡಿ, ಅಕ್ಕಿ ಹಿಟ್ಟು, ಖಾರದಪುಡಿ, ಚಿಕ್ಕದಾಗಿ ಕತ್ತರಿಸಿದ ಬೆಳ್ಳುಳ್ಳಿ, ಉಪ್ಪು, ಹಸಿಬಟಾಣಿಯನ್ನು ಹಾಕಿ ಚೆನ್ನಾಗಿ ನಾದಿಕೊಳ್ಳಿ. ಚಪಾತಿ ಮಾಡುವ ಹಿಟ್ಟಿನ ಹದಕ್ಕೆ ಇದರ ಮಿಶ್ರಣವಿರಲಿ. ನಂತರ ಸ್ವಲ್ಪ ಸ್ವಲ್ಪ ಹಿಟ್ಟು ತೆಗೆದುಕೊಂಡು ಚಿಕ್ಕ ಚಿಕ್ಕ ಉಂಡೆ ಮಾಡಿಕೊಳ್ಳಿ. ಇದನ್ನು ಕಾದ ಎಣ್ಣೆಯಲ್ಲಿ ಹೊಂಬಣ್ಣ ಬರುವವರೆಗೆ ಕರಿದು ಸಾಸ್ ಜೊತೆ ಸವಿಯಿರಿ.

 


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...