Kannada Duniya

ಕಾಶ್ಮೀರಿ ಪುಲಾವ್ ಮಾಡುವ ವಿಧಾನ ಇಲ್ಲಿದೆ ನೋಡಿ….!

ರಜಾದಿನಗಳಲ್ಲಿ ಪ್ರತಿಯೊಬ್ಬರು ಏನಾದರೂ ವಿಶೇಷವಾದ ಆಹಾರವನ್ನು ತಿನ್ನಲು ಬಯಸುತ್ತಾರೆ. ಅದರಲ್ಲೂ  ರಜಾದಿನಗಳಲ್ಲಿ ವಿಶೇಷವಾದ ಆಹಾರ ಸೇವಿಸಲು ಮಜಾ ಬರುತ್ತದೆ. ಹಾಗಾಗಿ ರಜಾದಿನಗಳಲ್ಲಿ ಕಾಶ್ಮೀರಿ ಪುಲಾವ್ ತಯಾರಿಸಿ ಸೇವಿಸಿ.

ಬೇಕಾಗುವ ಸಾಮಾಗ್ರಿಗಳು :
1ಕಪ್ ಬಾಸ್ಮಿತಿ ಅಕ್ಕಿ, 8 ಗೋಡಂಬಿ, 8 ಬಾದಾಮಿ, 1 ಚಮಚ ದಾಳಿಂಬೆ ಬೀಜಗಳು, ½ ಭಾಗ ಸೇಬು, 3 ಲವಂಗ, 1 ಇಂಚು ದಾಲ್ಚಿನ್ನಿ, 3 ಹಸಿರು ಏಲಕ್ಕಿ, 1 ಪುಲಾವ್ ಎಲೆ, 1 ಏಲಕ್ಕಿ, ½ ಚಮಚ ಕೆಂಪು ಮೆಣಸಿನ ಪುಡಿ, 1 ಚಮಚ ಸಕ್ಕರೆ, 1 ಚಮಚ ಕೇಸರಿ, ಉಪ್ಪು, ತುಪ್ಪ.

ರಾತ್ರಿ ಎಳನೀರು ಕುಡಿದರೆ ಏನಾಗುತ್ತದೆ ಗೊತ್ತಾ….?

ಮಾಡುವ ವಿಧಾನ : ಬಾಸ್ಮತಿ ಅಕ್ಕಿಯನ್ನು ಸ್ವಚ್ಛಗೊಳಿಸಿ ನೀರಿನಲ್ಲಿ ½ ಗಂಟೆ ನೆನೆಸಿಡಿ. ನಂತರ ಬಾಣಲೆಯಲ್ಲಿ ತುಪ್ಪವನ್ನು ಬಿಸಿ ಮಾಡಿ ಲವಂಗ, ಪುಲಾವ್ ಎಲೆ, ದಾಲ್ಚಿನ್ನಿ, ಏಲಕ್ಕಿ ಸೇರಿಸಿ ಫ್ರೈ ಮಾಡಿ. ಬಳಿಕ ಕೆಂಪು ಮೆಣಸಿನ ಪುಡಿ, ಸಕ್ಕರೆ, ಕೇಸರಿ ಮತ್ತು ಉಪ್ಪನ್ನು ಬೆರೆಸಿ ಅದಕ್ಕೆ ನೆನೆಸಿಟ್ಟ ಬಾಸ್ಮತಿ ಅಕ್ಕಿಯನ್ನು ಹಾಕಿ. 2 ನಿಮಿಷಗಳ ಕಾಲ ಫ್ರೈ ಮಾಡಿ. ಅಕ್ಕಿಗೆ 2 ಕಪ್ ನೀರು ಸೇರಿಸಿ ಪ್ಯಾನ್ ಅನ್ನು 15 ನಿಮಿಷಗಳ ಕಾಲ ಮುಚ್ಚಿಡಿ. ಅಕ್ಕಿ ಬೆಂದಿದ್ದರೆ ಗ್ಯಾಸ್ ಆಫ್ಪ ಮಾಡಿ. ಈಗ ಬೇಯಿಸಿದ ಅನ್ನದಲ್ಲಿ ಬಾದಾಮಿ, ಗೋಡಂಬಿ, ದಾಳಿಂಬೆ, ಬೀಜಗಳು, ಸೇಬುವನ್ನು ಮಿಶ್ರಣ ಮಾಡಿದರೆ ಕಾಶ್ಮೀರಿ ಪುಲಾವ್ ರೆಡಿ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...