Kannada Duniya

ಮುಖದ ಕಲೆಗಳನ್ನು ಹೋಗಲಾಡಿಸಲು ಹಾಲಿನಲ್ಲಿ ಈ ವಸ್ತುಗಳನ್ನು ಬೆರೆಸಿ ಹಚ್ಚಿ

ಕಲೆರಹಿತವಾದ ಚರ್ಮವನ್ನು ಹೊಂದುವುದು ಎಲ್ಲರ ಬಯಕೆಯಾಗಿದೆ. ಆದರೆ ನಮ್ಮ ಕೆಟ್ಟ ಆಹಾರ ಪದ್ಧತಿ, ವಾತಾವರಣದ ಕೊಳೆ, ಧೂಳಿನಿಂದ ಮುಖದಲ್ಲಿ ಮೊಡವೆಗಳು ಮೂಡಿ ಕಲೆ ಉಂಟಾಗುತ್ತದೆ. ಹಾಗಾಗಿ ಈ ಕಲೆಗಳನ್ನು ನಿವಾರಿಸಲು ಹಾಲಿನಲ್ಲಿ ಈ ವಸ್ತುಗಳನ್ನು ಬೆರೆಸಿ ಹಚ್ಚಿ.

ಮುಖದಲ್ಲಿರುವ ಕಲೆಗಳನ್ನು ತೆಗೆದುಹಾಕಲು ಹಾಲಿನಲ್ಲಿ ರೋಸ್ ವಾಟರ್ ಅನ್ನು ಬೆರೆಸಿ ಹಚ್ಚಿ. 2 ಚಮಚ ಹಾಲಿಗೆ ಕೆಲವು ಹನಿ ರೋಸ್ ವಾಟರ್ ಅನ್ನು ಮಿಕ್ಸ್ ಮಾಡಿ ಹತ್ತಿಯ ಸಹಾಯದಿಂದ ಮುಖಕ್ಕೆ ಹಚ್ಚಿ. ರಾತ್ರಿಯಿಡೀ ಬಿಟ್ಟು ಬೆಳಿಗ್ಗೆ ಮುಖವನ್ನು ಉಗುರು ಬೆಚ್ಚಗಿರುವ ನೀರಿನಿಂದ ತೊಳೆಯಿರಿ.

ಮುಲ್ತಾನಿ ಮಿಟ್ಟಿ ಕಲೆಗಳನ್ನು ನಿವಾರಿಸಲು ಸಹಕಾರಿಯಾಗಿದೆ. ಹಾಗಾಗಿ 1 ಚಮಚ ಮುಲ್ತಾನಿ ಮಿಟ್ಟಿಗೆ 2 ಚಮಚ ಹಾಲನ್ನು ಬೆರೆಸಿ ಮುಖಕ್ಕೆ ಹಚ್ಚಿ ಒಣಗಿದ ಬಳಿಕ ತೊಳೆಯಿರಿ.

ಹಾಗೇ ಮೊಡವೆಗಳು ಮತ್ತು ಅದರ ಕಲೆಗಳನ್ನು ನಿವಾರಿಸಲು ಹಾಲಿಗೆ ಅರಿಶಿನ ಬೆರೆಸಿ ಹಚ್ಚಿ. 15 ನಿಮಿಷ ಬಿಟ್ಟು ಮುಖವನ್ನು ತೊಳೆಯಿರಿ. ಇದು ಕಲೆಗಳನ್ನು ಕಡಿಮೆ ಮಾಡುತ್ತದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...