Kannada Duniya

ಶಾಶ್ವತವಾಗಿ ಮೊಡವೆಗಳನ್ನು ಇಲ್ಲವಾಗಿಸಲು ಹೀಗೆ ಮಾಡಿ!

ಮೊಡವೆಗಳನ್ನು ಹೋಗಲಾಡಿಸುವುದು ಸವಾಲಿನ ಕೆಲಸವೇ ಸರಿ. ಕೆಲವಷ್ಟು ಮನೆಮದ್ದುಗಳು ಮೊಡವೆಗೆ ತಾತ್ಕಾಲಿಕ ವಿರಾಮ ನೀಡಿದರೆ ಇನ್ನು ಕೆಲವು ಮನೆಮದ್ದುಗಳು ಶಾಶ್ವತವಾಗಿ ಅವುಗಳನ್ನು ಇಲ್ಲವಾಗಿಸುತ್ತವೆ. ಅಂತವುಗಳು ಯಾವುವು ಎಂಬುದನ್ನು ತಿಳಿಯೋಣ.

ಜೇನುತುಪ್ಪ ನಿಮ್ಮ ತ್ವಚೆಯ ಮೇಲಿನ ಮೊಡವೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಜೇನುತುಪ್ಪಕ್ಕೆ ಒಂದು ಚಮಚ ಮೊಸರು ಬೆರೆಸಿ ಫೇಸ್ ಮಾಸ್ಕ್ ಆಗಿ ಮುಖಕ್ಕೆ ಹಚ್ಚಿ. ಅರ್ಧ ಗಂಟೆ ಬಳಿಕ ಮುಖ ತೊಳೆಯಿರಿ. ವಾರಕ್ಕೆ ಎರಡು ಬಾರಿ ಹೀಗೆ ಮಾಡುತ್ತಾ ಬರುವುದರಿಂದ ಕೆಲವೇ ದಿನಗಳಲ್ಲಿ ಮೊಡವೆ ಸಮಸ್ಯೆ ಶಾಶ್ವತವಾಗಿ ದೂರವಾಗುತ್ತದೆ.

ಬೆಳಿಗ್ಗೆ ಎದ್ದ ತಕ್ಷಣ ಕಾಫಿ ಅಥವಾ ಚಹಾ ಕುಡಿಯುವ ಅಭ್ಯಾಸ ನಿಮಗಿದ್ದರೆ ಅದನ್ನು ಬಿಟ್ಟು ಗ್ರೀನ್ ಟೀಗೆ ಶಿಫ್ಟ್ ಆಗಿ. ಗ್ರೀನ್ ಟೀ ಯಲ್ಲಿರುವ ಆಂಟಿ
ಆಕ್ಸಿಡೆಂಟ್ ಗಳು ಮೊಡವೆಗಳನ್ನು ಕಡಿಮೆ ಮಾಡಲು ನೆರವಾಗುತ್ತದೆ ಹಾಗೂ ತ್ವಚೆಯನ್ನು ಆರೋಗ್ಯಯುತವಾಗಿಡುತ್ತದೆ.

ಅಲೋವೆರ ಜೆಲ್ ಅನ್ನು ಮೊಡವೆ ಕಾಣಿಸಿಕೊಂಡ ಜಾಗಕ್ಕೆ ಹಚ್ಚುವುದರಿಂದ ಕಲೆಗಳು ಕ್ರಮೇಣ ಮಾಯವಾಗುತ್ತದೆ. ನೀವು ಸೇವನೆ ಮಾಡುವ ಆಹಾರದಲ್ಲಿ ಸಕ್ಕರೆ ಹಾಗೂ ಜಿಡ್ಡಿನ ಪ್ರಮಾಣದ ತಿನಿಸುಗಳನ್ನು ಕಡಿಮೆ ಮಾಡಿ.

 


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...