Kannada Duniya

ಅದಿತಿ ಪ್ರಭುದೇವ್ ಬ್ಯೂಟಿ ಟಿಪ್ಸ್ ಇಲ್ಲಿದೆ ನೋಡಿ!

ನಟಿ ಅದಿತಿ ಪ್ರಭುದೇವ್ ನಟನೆಯಲ್ಲಿ ಮಾತ್ರವಲ್ಲ ಅಪ್ಪಟ್ಟ ಗೃಹಿಣಿಯಾಗಿಯೂ ಕಾಣಿಸಿಕೊಂಡವರು. ಅಡುಗೆ ಮನೆಯಲ್ಲಿ ಇವರದ್ದು ಎತ್ತಿದ ಕೈ. ಮನೆಯಲ್ಲೇ ಇರುವ ಕೆಲವು ವಸ್ತುಗಳಿಂದ ಹೊಳೆಯುವ ತ್ವಚೆ ಹಾಗೂ ಕೂದಲನ್ನು ಹೇಗೆ ಪಡೆಯಬಹುದು ಎಂಬುದನ್ನು ತಿಳಿಸಿಕೊಟ್ಟಿದ್ದಾರೆ.

ಕಡಲೆಬೇಳೆ, ತೊಗರಿ  ಬೇಳೆ, ಹೆಸರುಕಾಳು, ತುಸು ಅಕ್ಕಿ, ಸೀಗೆಕಾಯಿ, ಬೆಟ್ಟದ ನೆಲ್ಲಿಕಾಯಿ, ಬಾದಾಮಿ, ರೋಸ್ ಪೌಡರ್ ಅನ್ನು ಸಮಪ್ರಮಾಣದಲ್ಲಿ ತೆಗೆದುಕೊಂಡು ತುಸು ಬಿಸಿ ಮಾಡಿ ಮಿಕ್ಸಿಯಲ್ಲಿ ರುಬ್ಬಿ ಸಂಗ್ರಹಿಸಿಡಿ.

ತುಸು ಮುಲ್ತಾನಿಮಿಟ್ಟಿ ಸೇರಿಸಿ ಸ್ನಾನಕ್ಕೆ ಹೊರಡುವ ಮುನ್ನ ರೋಸ್ ವಾಟರ್ ನಲ್ಲಿ ಈ ಪುಡಿಯನ್ನು ಕಲಸಿ ಪೇಸ್ಟ್ ತಯಾರಿಸಿ. ಇದನ್ನು ಮುಖ, ಕೈ ಕಾಲು, ಕುತ್ತಿಗೆಯ ಭಾಗಕ್ಕೆ ಹಚ್ಚಿ 15 ನಿಮಿಷ ಬಳಿಕ ಸ್ನಾನ ಮಾಡಿದಾಗ ತ್ವಚೆಯ ಕಲೆಗಳು, ಟ್ಯಾನ್ ಗುರುತುಗಳು ದೂರವಾಗುತ್ತವೆ ಎನ್ನುತ್ತಾರವರು.

ಒಂದು ಲೋಟ ನೀರಿಗೆ ಮೆಂತೆ ಹಾಗೂ ಟೀ ಪುಡಿ ಹಾಕಿ ಕುದಿಸಿ ಸೋಸಿ ಇಟ್ಟುಕೊಳ್ಳಬೇಕು. ಇದಕ್ಕೆ ಸೀಗೇಕಾಯಿ ಪೌಡರ್ ಹಾಗೂ ಹೆನ್ನಾ ಪೌಡರ್ , ಮೊಸರು ಹಾಕಿ ರಾತ್ರಿಯಿಡೀ ನೆನೆಸಿಟ್ಟು ಮರುದಿನ ತಲೆಗೆ ಹಚ್ಚಿ. ನಾಲ್ಕು ಗಂಟೆ ಬಳಿಕ ಸ್ನಾನ ಮಾಡುವುದರಿಂದ ಮಹೆಂದಿ ಹಚ್ಚಿಕೊಂಡ ಲಾಭಗಳೇ ಕೂದಲಿಗೆ ಸಿಗುತ್ತವೆ ಎನ್ನುತ್ತಾರವರು.

 


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...