Kannada Duniya

ಕಿವಿ ನೋವಿನಿಂದ ಬಳಲುತ್ತಿದ್ದೀರಾ….? ಹಾಗಾದ್ರೆ ಇದರ ಕುರಿತು ಎಚ್ಚರ ವಹಿಸಿ!

ಹವಾಮಾನದ ವೈಪರೀತ್ಯದಿಂದ ಶೀತ ನೆಗಡಿ ಮೊದಲಾದ ಅನಾರೋಗ್ಯ ಸಮಸ್ಯೆಗಳೊಂದಿಗೆ ಕಿವಿ ನೋವು ಕೂಡ ಹೆಚ್ಚಾಗಿ ಕಂಡುಬರುತ್ತದೆ. ಬಹುತೇಕರು ಇದಕ್ಕೆ ಮನೆ ಮದ್ದುಗಳ ಮೊರೆ ಹೋಗುತ್ತಾರೆ. ಇದರಿಂದ ಸಮಸ್ಯೆ ಉಲ್ಬಣಗೊಂಡು ಗಂಟಲಿಗೆ ಹಾಗೂ ಉಸಿರಾಟಕ್ಕೆ ಸಂಬಂಧಿಸಿದ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಅದರ ಬದಲು ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಮುಖ್ಯ.

ತಂಪಾದ ಗಾಳಿ ಹಾಗೂ ಒಳಾಂಗಣ ಚಟುವಟಿಕೆಗಳಿಂದ ಕಿವಿ ನೋವಿನ ಸಮಸ್ಯೆ ಕಾಣಿಸಿಕೊಳ್ಳಬಹುದು. ಸಾಮಾನ್ಯವಾಗಿ ಇದು ಮೂಗು ಸೋರುವಿಕೆ, ಸೀನು, ಕೆಮ್ಮು ಅಥವಾ ಗಂಟಲು ನೋವಿನೊಂದಿಗೆ ಕಾಣಿಸಿಕೊಳ್ಳುತ್ತದೆ. ಇದು ತಂಪಾದ ವಾತಾವರಣದಿಂದ ಅಥವಾ ಶೀತದ ಲಕ್ಷಣವಾಗಿ ಕಾಣಿಸಿಕೊಂಡ
ಕಾರಣದಿಂದ ಯಾವುದೇ ಮನೆ ಮದ್ದುಗಳನ್ನು ಪ್ರಯೋಗಿಸಿ ಪ್ರಯೋಜನ ದೊರೆಯದು.

ನೋವು ನಿವಾರಕ ಬಾಮ್ ಗಳು, ಮೊಸರು, ಉಪ್ಪು ನೀರು, ಬೆಳ್ಳುಳ್ಳಿ ಎಣ್ಣೆ ಮೊದಲಾದ ಕಿವಿ ನೋವನ್ನು ಉಲ್ಬಣಗೊಳಿಸಬಹುದು ಇಲ್ಲವೇ ತೀವ್ರವಾದ ಸೈನಸೈಟಿಸ್ ಸಮಸ್ಯೆಗೆ ಕಾರಣವಾಗಬಹುದು. ಕಿವಿಯ ಒಳ ಪದರಗಳಿಗೆ ಹಾನಿಯನ್ನು ಉಂಟು ಮಾಡುವ ಸಾಧ್ಯತೆ ಇದೆ. ಹಾಗಾಗಿ ಈ ಮನೆ ಮದ್ದುಗಳನ್ನು
ಪ್ರಯತ್ನಿಸುವ ಬದಲು ಕೂಡಲೇ ಇ ಎನ್ ಟಿ ತಜ್ಞರನ್ನು ಭೇಟಿಯಾಗುವುದು ಒಳ್ಳೆಯದು.

 


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...