Kannada Duniya

‘ಬೆವರು’ ವಾಸನೆ ಬಗ್ಗೆ ಚಿಂತೆ ಮಾಡುತ್ತಿದ್ದೀರಾ ಇದನ್ನು ಓದಿ….!

ಬೇಸಿಗೆಯಲ್ಲಿ ಮೈ ವಿಪರೀತ ಬೆವರುವುದು ಸರ್ವೇ ಸಾಮಾನ್ಯ. ಕಂಕುಳನ್ನು ಎಷ್ಟೇ ಸ್ವಚ್ಛವಾಗಿ ಇಟ್ಟುಕೊಂಡರೂ ಈ ಬೆವರು ವಾಸನೆ ನಿಮ್ಮ ಹಾಗೂ ಆತ್ಮೀಯರ ಮೂಡ್ ಅನ್ನೇ ಕೆಲವೊಮ್ಮೆ ಹಾಳು ಮಾಡಿ ಬಿಡಬಹುದು. ಇದನ್ನು ತಪ್ಪಿಸುವುದು ಹೇಗೆ..?

ಬೇಸಿಗೆಯಲ್ಲಿ ಕಾಫಿ ಕುಡಿಯುವುದನ್ನು ಸಾಧ್ಯವಾದಷ್ಟು ಕಡಿಮೆ ಮಾಡಿ. ದಿನಕ್ಕೆ ಎರಡು ಬಾರಿ ಸ್ನಾನ ಮಾಡಲು ಮರೆಯದಿರಿ. ಅದರಲ್ಲೂ ಜಿಮ್ ಗೆ ಹೋಗಿ ಬಂದ ಬಳಿಕ ಇಲ್ಲವೇ ಬೆವರುವ ಕೆಲಸ ಮಾಡಿದ ಬಳಿಕ ಬಟ್ಟೆ ಬದಲಾಯಿಸಿ ಹಾಗೂ ಸ್ನಾನ ಮಾಡಿ.

‘ಸೌತೆಕಾಯಿ ಲಸ್ಸಿ’ ಸವಿದು ನೋಡಿ…!

ಬೆಳ್ಳುಳ್ಳಿ ಹಾಗೂ ಈರುಳ್ಳಿಯನ್ನು ಹೆಚ್ಚು ಸೇವಿಸುವುದರಿಂದಲೂ ದೇಹ ದುರ್ಗಂಧ ಬೀರುತ್ತದೆ. ಕೆಲವು ದಿನಗಳ ತನಕ ಅವುಗಳಿಂದ ದೂರವಿರಿ. ತಾಜಾ ಹಣ್ಣು, ತರಕಾರಿ ಸೇವಿಸಿ. ವಿಟಮಿನ್ ಬಿ ಸಪ್ಲಿಮೆಂಟ್ ತೆಗೆದುಕೊಳ್ಳಿ.

ಬೆವರಿನ ವಾಸನೆ ಹೆಚ್ಚಲು ನೀವು ಧರಿಸುವ ಉಡುಪು ಕೂಡಾ ಕಾರಣವಿರಬಹುದು. ಹಾಗಾಗಿ ಹತ್ತಿಯ ಕಾಟನ್ ಬಟ್ಟೆಗಳನ್ನೇ ಹೆಚ್ಚಾಗಿ ಧರಿಸಿ. ಇದು ದೇಹಕ್ಕೂ ಒಳ್ಳೆಯದು. ಬೆವರನ್ನೂ ಹೀರಿ ದೇಹ ವಾಸನೆ ಬರದಂತೆ ನೋಡಿಕೊಳ್ಳುತ್ತದೆ.

ಬೇಕಿಂಗ್ ಸೋಡಾ, ಆ್ಯಪಲ್ ಸೈಡರ್ ವಿನೆಗರ್ ಅಥವಾ ನಿಂಬೆ ಹಣ್ಣಿನ ರಸದಿಂದ ಅಂಡರ್ ಆರ್ಮ್ ಅನ್ನು ತೊಳೆದುಕೊಳ್ಳಿ. ಟೊಮೆಟೊ ರಸವೂ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.

Here’s how to avoid sweat smell from underarms.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...