Kannada Duniya

ಬಿಸಿಲ ಧಗೆಯಲ್ಲೂ ಹಾಟ್ ಕಾಣೋದು ಹೇಗೆ ಗೊತ್ತಾ…?

ಬೇಸಿಗೆಯಲ್ಲಿ ಸೂರ್ಯನ ಶಾಖಕ್ಕೆ ಬಟ್ಟೆ ಹಾಳಾಗುತ್ತದೆ. ಕಾಲೇಜ್ ಹಾಗೂ ಕಚೇರಿಗಳಿಗೆ ಹೋಗುವವರು ಕಿರಿಕಿರಿ ಅನುಭವಿಸುತ್ತಾರೆ. ಬೆವರಿನ ವಾಸನೆ, ಬೆವರಿನ ಕಲೆ ಅವರನ್ನು ಚಿಂತೆಗೀಡು ಮಾಡುತ್ತದೆ. ಎಲ್ಲ ಋತುವಿನಲ್ಲೂ ಒಂದೇ ರೀತಿಯ ಬಟ್ಟೆ ಧರಿಸುವುದು ಸೂಕ್ತವಲ್ಲ. ಬೇಸಿಗೆಗಾಗಿ ಮಾರುಕಟ್ಟೆಗೆ ವೆರೈಟಿ ಬಟ್ಟೆಗಳು ಲಗ್ಗೆ ಇಟ್ಟಿವೆ. ಅವುಗಳ ಬಣ್ಣ, ಕ್ವಾಲಿಟಿ ನೋಡಿ ನಿಮಗೆ ಹಿತವೆನಿಸುವ ಬಟ್ಟೆಯನ್ನು ಆಯ್ಕೆ ಮಾಡಿಕೊಳ್ಳಿ.

ಬೇಸಿಗೆಯಲ್ಲಿ ತಿಳಿ ಬಣ್ಣದ ಬಟ್ಟೆ ಸೂಕ್ತ. ಇದು ಬೆವರನ್ನು ಸುಲಭವಾಗಿ ಹೀರಿಕೊಳ್ಳುತ್ತದೆ. ಹಾಗಾಗಿ ತಿಳಿ ನೀಲಿ, ಹಳದಿ, ಗುಲಾಬಿ ಹಾಗೂ ಬಿಳಿ ಬಣ್ಣದ ಬಟ್ಟೆಯನ್ನು ಆಯ್ಕೆ ಮಾಡಿಕೊಳ್ಳಿ.

ಸಾಮಾನ್ಯವಾಗಿ ಬೇಸಿಗೆಯಲ್ಲಿ ಟೈಟ್ ಫಿಟ್ ಡ್ರೆಸ್ ಧರಿಸಲು ಯಾರೂ ಇಷ್ಟಪಡುವುದಿಲ್ಲ. ಸಡಿಲವಾದ ಡ್ರೆಸ್ ಧರಿಸಲು ಬಯಸ್ತಾರೆ. ಆದ್ರೆ ಅದು ಲುಕ್ ಹಾಳು ಮಾಡುತ್ತೆ ಎಂಬ ಭಯ ಕೆಲವರಿಗಿದೆ. ಹಾಗೇನೂ ಇಲ್ಲ. ಕಲರ್ ಕಾಂಬಿನೇಷನ್ ಚೆನ್ನಾಗಿದ್ದು, ತಂಪಾಗುವ ಬಟ್ಟೆ ಧರಿಸಿದ್ರೆ ನೀವೂ ಕಿರಿಕಿರಿ ಅನುಭವಿಸುವುದಿಲ್ಲ, ನೋಡುವವರ ಕಣ್ಣು ತಂಪಾಗುತ್ತದೆ.

ಪ್ರಯಾಣ ಮಾಡುವುದರಿಂದಾಗುವ ಪ್ರಯೋಜನಗಳೇನು… ?

ಸೂರ್ಯನ ಕಿರಣದಿಂದ ತಪ್ಪಿಸಿಕೊಳ್ಳಲು ನೀವು ಹ್ಯಾಟ್ ಬಳಸಬಹುದು. ಹ್ಯಾಟ್ ಇಷ್ಟವಾಗದಿದ್ದಲ್ಲಿ ಸ್ಕಾರ್ಫ್ ಬಳಸಿ. ನಿಮ್ಮ ಡ್ರೆಸ್ ಗೆ ಹೊಂದುವ ಬೇರೆ ಬೇರೆ ಬಣ್ಣದ ಸ್ಕಾರ್ಫ್ ಹಾಕಿಕೊಳ್ಳಿ.

ಶಾರ್ಟ್ಸ್ ಹಾಕಿಕೊಳ್ಳಲು ಬಯಸುವ ಹುಡುಗಿಯರಿಗೆ ಇದು ಸೂಕ್ತ ಟೈಂ. ಶಾರ್ಟ್ ಜೊತೆ ನೀವು ಟಾಪ್ ಅಥವಾ ಟೀ ಶರ್ಟ್ ಧರಿಸಬಹುದು. ಬೇಸಿಗೆಯಲ್ಲಿ ಹಿತವೆನಿಸುವ ಜೊತೆಗೆ ಧರಿಸಲೂ ಆರಾಮವೆನಿಸುವ ಬಟ್ಟೆ ಶಾರ್ಟ್ಸ್.

 


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...