Kannada Duniya

ಬೇಸಿಗೆಯಲ್ಲಿ ‘ಅಧರ’ದ ಬಗ್ಗೆಯೂ ಇರಲಿ ಕಾಳಜಿ….!

ಬೇಸಿಗೆ ಬಂದಾಗ ಮುಖಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡುತ್ತೇವೆ. ತುಟಿಗೆ ಒಂದಿಷ್ಟು ರಂಗು ಮೆತ್ತಿಕೊಂಡು ಸುಮ್ಮನಾಗುತ್ತೇವೆ. ಮುಖದಷ್ಟೇ ತುಟಿಯ ಕಾಳಜಿಯು ಅಗತ್ಯ. ಇಲ್ಲಿ ಅಧರದ ಕಾಳಜಿ ಕುರಿತು ಒಂದಷ್ಟು ಟಿಪ್ಸ್ ಇದೆ ನೋಡಿ.

ಮುಖದ ಕಾಳಜಿಯಷ್ಟೇ ತುಟಿಯ ಆರೈಕೆಯೂ ಕೂಡ ಅಗತ್ಯ. ತುಟಿಯಲ್ಲಿ ಬೆವರು ಬರುವುದಿಲ್ಲ. ಯಾಕೆಂದರೆ ಇದರಲ್ಲಿ ಸೆಬಾಸಿಯಸ್ ಗ್ರಂಥಿ ಇರುವುದರಿಂದ ಇದು ತುಟಿಯನ್ನು ರಕ್ಷಿಸುವ ಎಣ್ಣೆಯನ್ನು ಸ್ರವಿಸುತ್ತದೆ. ಇದು ತುಟಿಯನ್ನು ತೇವಾಂಶವಾಗಿ ಇರುವಂತೆ ನೋಡಿಕೊಳ್ಳುತ್ತದೆ. ಈ ಗ್ರಂಥಿಯ ಕೊರತೆಯಿಂದಾಗಿ ಕೆಲವೊಮ್ಮೆ ತುಟಿಯಲ್ಲಿ ಬಿರುಕು ಮೂಡುವುದು, ಒಣಗುವುದು ಆಗುತ್ತದೆ. ಹಾಗಾಗಿ ತುಟಿಗಳಿಗೂ ಕೂಡ ಸನ್ ಸ್ಕ್ರಿನ್ ನ ಅಗತ್ಯವಿರುತ್ತದೆ. ಇದು ತುಟಿಗಳನ್ನು ಯುವಿ ಕಿರಣಗಳ ಹಾನಿಕಾರಕ ಪರಿಣಾಮವನ್ನು ತಡೆಯುತ್ತದೆ. ಹಾಗಾಗಿ SPF15 ಇರುವ ಲಿಪ್ ಬಾಮ್ ಗಳನ್ನು ಪ್ರತಿ ಎರಡು ಗಂಟೆಗೊಮ್ಮೆ ನಿಮ್ಮ ತುಟಿಗೆ ಸವರುತ್ತಿರಿ.

ಸೌಂದರ್ಯ ವೃದ್ಧಿಗೆ ಶುಂಠಿ!

ಇನ್ನು ತುಟಿಯನ್ನು ಆಗಾಗ ಎಕ್ಸ್ ಫೋಲಿಯೆಟ್ ಮಾಡುವುದು ಕೂಡ ಅತೀ ಅಗತ್ಯ. ವಾರದಲ್ಲಿ ಎರಡು ಬಾರಿ ಹೀಗೆ ಮಾಡುವುದರಿಂದ ತುಟಿಯಲ್ಲಿರುವ ಕೊಳೆ ಹಾಗೂ ಡೆಡ್ ಸ್ಕಿನ್ ಅನ್ನು ನಿವಾರಿಸಿಕೊಳ್ಳಬಹುದು. ಎಕ್ಸ್ ಫೋಲಿಯೆಟ್ ಮಾಡಿದ ನಂತರ ಲಿಮ್ ಬಾಮ್ ಹಚ್ಚುವುದನ್ನು ಮರೆಯಬೇಡಿ.

ಇನ್ನು ನಾನಾ ಬಣ್ಣದ ಲಿಪ್ ಸ್ಟಿಕ್ ಹಚ್ಚುವ ಮೊದಲು ತುಟಿಗೆ ಮೊಯಿಶ್ಚರೈಸರ್ ಹಾಗೂ ಸನ್ ಸ್ಕ್ರಿನ್ ಲೋಷನ್ ಹಚ್ಚುವುದನ್ನು ಮರೆಯಬೇಡಿ. ಕೆಲವೊಂದು ಲಿಪ್ ಸ್ಟಿಕ್ ಗಳು ನಿಮ್ಮ ತುಟಿಯನ್ನು ಡ್ರೈ ಮಾಡುತ್ತದೆ. ಹೀಗೆ ಮಾಡುವುದರಿಂದ ತುಟಿಯು ತೇವಾಂಶದಿಂದ ಕೂಡಿರುವಂತೆ ಮಾಡುತ್ತದೆ. ಇನ್ನು ಗ್ಲಾಸಿ ಆಗಿರುವಂತಹ ಲಿಪ್ ಸ್ಟಿಕ್ ಗಳನ್ನು ಪ್ರತಿನಿತ್ಯ ನಿಮ್ಮ ತುಟಿಗೆ ಹಚ್ಚದೇ ಇರುವುದೇ ಒಳ್ಳೆಯದು. ಕೆಲವೊಂದು ಅನಿವಾರ್ಯವಾದ ಕಾರ್ಯಕ್ರಮಗಳಿಗೆ ಮಾತ್ರ ಬಳಸಿ.

ಇನ್ನು ತುಂಬಾ ಸೆನ್ಸಿಟಿವ್ ಚರ್ಮದವರಿಗೆ ಎಲ್ಲಾ ಲಿಪ್ ಬಾಮ್ ಗಳು ಆಗಿಬರುವುದಿಲ್ಲ. ಅಂಥವರು, ಹಾಲಿನ ಕೆನೆ, ಬೆಣ್ಣೆ, ಕೊಬ್ಬರಿ ಎಣ್ಣೆಯನ್ನು ಆಗಾಗ ತುಟಿಗೆ ಸವರುತ್ತಾ ಇರಿ.

Tips to take care of lips during summer


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...