Kannada Duniya

ಕೂದಲಿನ ಪೋಷಣೆಗೆ ಗ್ಲಿಸರಿನ್ ಅನ್ನು ಹೀಗೆ ಹಚ್ಚಿ

ಗ್ಲಿಸರಿನ್ ಚರ್ಮದ ಆರೈಕೆಗೆ ಉತ್ತಮ. ಇದನ್ನು ಚರ್ಮಕ್ಕೆ ಹಚ್ಚುವುದರಿಂದ ಚರ್ಮದ ತೇವಾಂಶವನ್ನು ಕಾಪಾಡುತ್ತದೆ. ಚರ್ಮ ಹೊಳೆಯುತ್ತದೆ. ಆದರೆ ಈ ಗ್ಲಿಸರಿನ್ ಅನ್ನು ಕೂದಲಿಗೂ ಹಚ್ಚಬಹುದು. ಹಾಗಾಗಿ ಅದನ್ನು ಹೇಗೆ ಬಳಸಬೇಕು ಎಂಬುದನ್ನು ತಿಳಿಯಿರಿ.

ಗ್ಲಿಸರಿನ್ ಗೆ ನೀರನ್ನು ಮಿಕ್ಸ್ ಮಾಡಿ ಅದಕ್ಕೆ ಕೆಲವು ಹನಿ ರೋಸ್ ವಾಟರ್ ಅನ್ನು ಮಿಶ್ರಣ ಮಾಡಿ. ಇದನ್ನು ಕೂದಲಿಗೆ ಹಚ್ಚಿ 15 ನಿಮಿಷದ ನಂತರ ಶಾಂಪೂ ಮಾಡಿ. ಇದು ಕೂದಲಿನ ಶುಷ್ಕತೆಯನ್ನು ಕಡಿಮೆ ಮಾಡುತ್ತದೆ.

ಹಾಗೇ ಗ್ಲಿಸರಿನ್ ಗೆ ಜೇನುತುಪ್ಪವನ್ನು ಸಮಪ್ರಮಾಣದಲ್ಲಿ ಬೆರೆಸಿ ಅದರಲ್ಲಿ 2 ಚಮಚ ತೆಂಗಿನೆಣ್ಣೆಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಕೂದಲಿಗೆ ಹಚ್ಚಿ. 30 ನಿಮಿಷ ಬಿಟ್ಟು ಕೂದಲನ್ನು ತೊಳೆಯಿರಿ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...