Kannada Duniya

ನಿಮ್ಮ ಹುಬ್ಬುಗಳ ಕೂದಲು ತುಂಬಾ ತೆಳುವಾಗಿದೆಯಾ….? 

ದಪ್ಪ ಹುಬ್ಬುಗಳು ಹೊಂದಬೇಕು ಎಂಬ ಆಸೆ ಎಲ್ಲಾ ಹೆಣ್ಣುಮಕ್ಕಳಿಗಿರುತ್ತದೆ.ಹುಬ್ಬುಗಳನ್ನು ದಪ್ಪಗಾಗಿಸಲು ನೀವು ಸೌಂದರ್ಯ ವರ್ಧಕಗಳ ಮೊರೆ ಹೋಗಬೇಕಿಲ್ಲ. ಈ ಕೆಲವು ಮನೆಮದ್ದುಗಳನ್ನು ಪ್ರಯತ್ನಿಸಿದರೆ ಸಾಕು. ಸುಂದರವಾದ, ದಟ್ಟವಾದ ಹುಬ್ಬು ನಿಮ್ಮದಾಗುತ್ತದೆ.

ಜಿಡ್ಡು ಜಿಡ್ಡಾಗಿರುವ ಹರಳೆಣ್ಣೆಯಲ್ಲಿ ಪ್ರೋಟೀನ್ ಹಾಗೂ ಕೊಬ್ಬಿನ ಆಮ್ಲಗಳು ಸಮೃದ್ಧವಾಗಿದ್ದು ಇದು ಕೂದಲಿನ ಕಿರುಚೀಲಗಳನ್ನು ಪೋಷಿಸುತ್ತದೆ. ನಿತ್ಯ ನೀವು ಹುಬ್ಬಿನ ಮೇಲೆ ಹರಳೆಣ್ಣೆಯನ್ನು ಹಚ್ಚುತ್ತಾ ಬರುವುದರಿಂದ ಕೂದಲಿನ ಬೆಳವಣಿಗೆ ಹೆಚ್ಚುತ್ತದೆ ಹಾಗೂ ದಪ್ಪವಾಗುತ್ತದೆ.

ಮೊಟ್ಟೆಯ ಹಳದಿ ಭಾಗವನ್ನು ನೀವು ಇದೇ ರೀತಿ ಬಳಸಬಹುದು. ಈ ಹಳದಿ ಭಾಗವನ್ನು ಮೊದಲು ಚೆನ್ನಾಗಿ ವಿಸ್ಕ್ ಮಾಡಿ ಬಳಿಕ ಹುಬ್ಬುಗಳಿಗೆ ಹಚ್ಚಿ 20 ನಿಮಿಷಗಳ ಬಳಿಕ ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ. ವಾರಕ್ಕೆರಡು ಬಾರಿ ಇದನ್ನು ಪುನರಾವರ್ತಿಸಿ.

ನಿಂಬೆಹಣ್ಣಿನ ರಸವನ್ನು ಕೂದಲಿನ ಮೇಲೆ ಹಚ್ಚಿ 10 ನಿಮಿಷದ ಬಳಿಕ ನೀರಿನಿಂದ ಸ್ವಚ್ಛಗೊಳಿಸಿ. ಹೀಗೆ ಹಚ್ಚುವಾಗ ವಿಪರೀತ ಉರಿ ಕಾಣಿಸಿಕೊಳ್ಳುತ್ತದೆ. ನಿಮ್ಮ ತ್ವಚೆ ಸೂಕ್ಷ್ಮ ಸ್ವಭಾವದ್ದಾಗಿದ್ದರೆ ಇದನ್ನು ಹಚ್ಚುವುದು ಒಳ್ಳೆಯದಲ್ಲ.

ಅದೇ ರೀತಿ ಮೆಂತೆ ಬೀಜಗಳನ್ನು ಪುಡಿ ಮಾಡಿ ಅಥವಾ ರಾತ್ರಿ ಇಡೀ ನೆನೆಸಿಡಿ. ಮರುದಿನ ಪೇಸ್ಟ್ ತಯಾರಿಸಿ ಹುಬ್ಬುಗಳ ಮೇಲೆ ಹಚ್ಚಿ ಅರ್ಧ ಗಂಟೆ ಬಳಿಕ ಸ್ವಚ್ಛವಾದ ನೀರಿನಿಂದ ತೊಳೆಯಿರಿ.

ದಪ್ಪಗಿನ ಹಾಲು, ತೆಂಗಿನ ಎಣ್ಣೆಯನ್ನು ಹಚ್ಚಿಕೊಳ್ಳುವುದರಿಂದಲೂ ಇದೇ ಪ್ರಯೋಜನವನ್ನು ಪಡೆಯಬಹುದು.

 


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...