Kannada Duniya

ದಪ್ಪವಾದ ಕೂದಲನ್ನು ಹೊಂದಲು ಹರಳೆಣ್ಣೆಯ ಈ ಹೇರ್ ಮಾಸ್ಕ್ ಬಳಸಿ

ಹರಳೆಣ್ಣೆ ಕೂದಲಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಲ್ಲಿ ಅನೇಕ ಪೋಷಕಾಂಶಗಳಿದ್ದು, ಇದು ಕೂದಲಿನ ಸೌಂದರ್ಯವನ್ನು ಹೆಚ್ಚಿಸುತ್ತದೆ. ಹಾಗಾಗಿ ನೀವು ಉದ್ದವಾದ, ದಪ್ಪವಾದ ಕೂದಲನ್ನು ಹೊಂದಲು ಹರಳೆಣ್ಣೆಯನ್ನು ಹೀಗೆ ಬಳಸಿ.

2 ಚಮಚ ಹರಳೆಣ್ಣೆಗೆ 2 ಚಮಚ ಮೆಂತ್ಯ ಪುಡಿಯನ್ನು ಬೆರೆಸಿ ಅದನ್ನು ಕೂದಲಿಗೆ ಹಚ್ಚಿ 30 ನಿಮಿಷ ಬಿಟ್ಟು ಕೂದಲನ್ನು ತೊಳೆಯಿರಿ.

2 ಚಮಚ ಹರಳೆಣ್ಣೆಗೆ ಒಂದು ಮೊಟ್ಟೆಯನ್ನು ಸೇರಿಸಿ ಅದಕ್ಕೆ 1 ಚಮಚ ಮೊಸರನ್ನು ಮಿಕ್ಸ್ ಮಾಡಿ ಕೂದಲಿಗೆ ಹಚ್ಚಿ 45 ನಿಮಿಷ ಬಿಟ್ಟು ಕೂದಲನ್ನು ತೊಳೆಯಿರಿ.

2 ಚಮಚ ಹರಳೆಣ್ಣೆಗೆ 2 ಚಮಚ ಅಲೋವೆರಾ ಜೆಲ್ ಮತ್ತು 1 ಚಮಚ ಜೇನುತುಪ್ಪವನ್ನು ಮಿಕ್ಸ್ ಮಾಡಿ ಕೂದಲಿಗೆ ಹಚ್ಚಿ 30 ನಿಮಿಷ ಬಿಟ್ಟು ಕೂದಲನ್ನು ತೊಳೆಯಿರಿ.

1 ಚಮಚ ಹರಳೆಣ್ಣೆಗೆ 1 ಚಮಚ ತೆಂಗಿನೆಣ್ಣೆಯನ್ನು ಮಿಕ್ಸ್ ಮಾಡಿ ಕೂದಲಿಗೆ ಹಚ್ಚಿದರೆ ಕೂದಲು ಸೊಂಪಾಗಿ ಬೆಳೆಯುತ್ತದೆಯಂತೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...