Kannada Duniya

ಮಚ್ಚೆಗಳು ನಿಮ್ಮ ಸೌಂದರ್ಯವನ್ನು ಹಾಳುಮಾಡುತ್ತಿದ್ದರೆ ಈ ಮನೆಮದ್ದನ್ನು ಹಚ್ಚಿ

ಮುಖದಲ್ಲಿ ಮಚ್ಚೆಗಳಿದ್ದರೆ ಅದು ನಿಮ್ಮ ಸೌಂದರ್ಯವನ್ನು ಹಾಳು ಮಾಡುತ್ತದೆ. ಹಾಗಾಗಿ ಆ ಮಚ್ಚೆಗಳನ್ನು ಮುಖದಿಂದ ನಿವಾರಿಸುವುದು ಅವಶ್ಯಕ. ಹಾಗಾಗಿ ಇದನ್ನು ನಿವಾರಿಸಲು ದುಬಾರಿ ಹಣ ಖರ್ಚುಮಾಡುವ ಬದಲು ಈ ಮನೆಮದ್ದನ್ನು ಬಳಸಿ.

ಕಡಲೆಹಿಟ್ಟು, ಅರಿಶಿನದ ಪೇಸ್ಟ್ ಮುಖದಲ್ಲಿರುವ ಮಚ್ಚೆಗಳನ್ನು ನಿವಾರಿಸಲು ಸಹಾಯ ಮಾಡುತ್ತವೆ. ಹಾಗಾಗಿ ಕಡಲೆಹಿಟ್ಟು ಮತ್ತು ಅರಿಶಿನಕ್ಕೆ ಮೊಸರು, ರೋಸ್ ವಾಟರ್ ಮತ್ತು 2 ಹನಿ ನಿಂಬೆರಸವನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿ 10 ನಿಮಿಷಗಳ ಕಾಲ ಬಿಟ್ಟು ತಣ್ಣೀರಿನಿಂದ ತೊಳೆಯಿರಿ.

ಹಾಗೇ ಮುಖವನ್ನು ಆಗಾಗ ರೋಸ್ ವಾಟರ್ ನಿಂದ ಒರೆಸಿಕೊಳ್ಳಿ. ಅಥವಾ ಜೇನುತುಪ್ಪ ಮತ್ತು ಅಲೋವೆರಾ ಮಿಕ್ಸ್ ಮಾಡಿ ಆಗಾಗ ಮುಖಕ್ಕೆ 5 ನಿಮಿಷಗಳ ಕಾಲ ಮಸಾಜ್ ನೀಡಿ. ಪ್ರತಿದಿನ ಟೋನರ್, ಮಾಯಿಶ್ಚರೈಸರ್ ಅನ್ನು ಹಚ್ಚಿ. ದಿನಕ್ಕೆ 3 ಬಾರಿ ಸನ್ ಸ್ಕ್ರೀನ್ ಬಳಸಿ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...