Kannada Duniya

ಮನೆಯಲ್ಲೇ ವ್ಯಾಕ್ಸಿಂಗ್ ಮಾಡುವಾಗ ಇರಲಿ ಎಚ್ಚರ

ಪ್ರತಿಬಾರಿ ಪಾರ್ಲರ್ ಗೆ ತೆರಳಿ ವ್ಯಾಕ್ಸಿಂಗ್ ಮಾಡಿಕೊಳ್ಳುವ ಬದಲು ಅದನ್ನು ಮನೆಯಲ್ಲೇ ಮಾಡುವವರ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಬಹಳ ಹೆಚ್ಚಿದೆ. ಹೀಗೆ ವ್ಯಾಕ್ಸಿಂಗ್ ಮಾಡುವಾಗ ಈ ಕೆಲವು ವಿಚಾರಗಳನ್ನು ನೀವು ನೆನಪಿನಲ್ಲಿ ಇಟ್ಟುಕೊಳ್ಳುವುದು ಮುಖ್ಯ.

ಮೊದಲಿಗೆ ವ್ಯಾಕ್ಸಿಂಗ್ ಸ್ಟ್ರಿಪ್ ಬಳಸುವಾಗ ಅದನ್ನು ವೇಗವಾಗಿ ಎಳೆಯುವ ಬದಲು ನಿಧಾನವಾಗಿಯೂ ಎಳೆಯಬಹುದು. ಆದರೆ ಲೇಪನ ಅತಿಯಾಗಿಯೂ ಬಿಸಿಯಿರಬಾರದು ಹಾಗೂ ಪೂರಾ ತಣ್ಣಗಾಗಿಯೂ ಇರಬಾರದು.

ವ್ಯಾಕ್ಸಿಂಗ್ ಮಾಡುವಾಗ ಗಾಯದ ಭಾಗವನ್ನು ಸ್ಪರ್ಶಿಸದಂತೆ ಎಚ್ಚರ ವಹಿಸಿ. ಇಲ್ಲವಾದರೆ ಸೋಂಕು ಹೆಚ್ಚಾಗಬಹುದು ಇಲ್ಲವೇ ಗಾಯ ಉಲ್ಬಣಗೊಳ್ಳಬಹುದು.

ವ್ಯಾಕ್ಸ್ ಕ್ರೀಮ್ ಅನ್ನು ನೇರವಾಗಿ ಅನ್ವಯಿಸಿಕೊಳ್ಳುವ ಮೊದಲು ಅದರನ್ನು ಮೊಣಕೈ ಅಥವಾ ಇತರ ಭಾಗಗಳಿಗೆ ಹಚ್ಚಿ ನೋಡಿ. ಸರಿ ಇದೆ ಎಂದಾದ ಬಳಿಕವೇ ಮುಂದುವರಿಯಿರಿ.

ಒಮ್ಮೆ ಬಳಸಿದ ಅಥವಾ ಹಳೆಯ ವ್ಯಾಕ್ಸ್ ತ್ವಚೆಗೆ ಹಾನಿಯುಂಟುಮಾಡಬಹುದು. ಹಾಗಾಗಿ ಗುಣಮಟ್ಟದ ವ್ಯಾಕ್ಸ್ ಅನ್ನೇ ಖರೀದಿಸಿ ಹಾಗೂ ಬಳಸಿ. ನಿಮ್ಮದು ಸೂಕ್ಷ್ಮ ತ್ವಚೆಯಾಗಿದ್ದರೆ ಬಳಸುವಾಗ ಹೆಚ್ಚಿನ ಎಚ್ಚರ ವಹಿಸಿ.

 


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...