Kannada Duniya

ಮುಖ ಗ್ಲೋ ಆಗಲು ಈ ಸೌಂದರ್ಯ ಸಲಹೆಗಳನ್ನು ಪಾಲಿಸಿ….!

ಅನೇಕರು ಪಾರ್ಲರ್ ಗೆ ಹೋಗಿ ಮುಖಕ್ಕೆ ಫೇಶಿಯಲ್, ಬ್ಲೀಚ್ ಮಾಡಿಸುತ್ತಾರೆ. ಆದರೆ ಅದರ ಬದಲು ಮನೆಯಲ್ಲಿಯೇ ಸುಂದರವಾದ, ಆರೋಗ್ಯಕರವಾದ ತ್ವಚೆಯನ್ನು ಪಡೆಯಲು ಈ ಸರಳವಾದ ಸೌಂದರ್ ದಿನಚರಿಯನ್ನು ಅನುಸರಿಸಿ.

ಸುಂದರವಾದ ತ್ವಚೆಯನ್ನು ಪಡೆಯಲು ತ್ವಚೆಯನ್ನು ಶುದ್ಧೀಕರಣಗೊಳಿಸುವುದು ಬಹಳ ಮುಖ್ಯ. ಹಾಗಾಗಿ ಮುಖವನ್ನು ಪ್ರತಿದಿನ ಹಾಲಿನಿಂದ ತೊಳೆದು ಸ್ವಚ್ಛಗೊಳಿಸಿ.

ಮೃದುವಾದ ಚರ್ಮವನ್ನು ಪಡೆಯಲು ಸತ್ತ ಚರ್ಮಕೋಶಗಳನ್ನು ನಿವಾರಿಸಬೇಕು. ಅದಕ್ಕಾಗಿ ಮುಖವನ್ನು ವಾರದಲ್ಲಿ 2 ಬಾರಿ ಎಕ್ಸ್ ಪೋಲಿಯೇಟ್ ಮಾಡಿ.

ಚರ್ಮದ ನೈಸರ್ಗಿಕವಾದ ತೇವಾಂಶ ಕಾಪಾಡುವುದು ಅತಿ ಅವಶ್ಯಕ. ಹಾಗಾಗಿ ಪ್ರತಿದಿನ ರಾತ್ರಿ ಮುಖಕ್ಕೆ ನೈಟ್ ಕ್ರೀಂಗಳನ್ನು ಹಚ್ಚಿ.

ಚರ್ಮದ ಸಮಸ್ಯೆಗಳಿಂದ ದೂರವಿರಲು ಚರ್ಮಕ್ಕೆ ಪ್ರತಿದಿನ ಟೋನರ್ ಅನ್ನು ಬಳಸಿ. ಇದರಿಂದ ಯಾವುದೇ ಚರ್ಮದ ಸಮಸ್ಯೆ ಕಾಡಲ್ಲ.

ಉಪವಾಸದ ಸಮಯದಲ್ಲಿ ಮಲಬದ್ದತೆಯ ಸಮಸ್ಯೆಯಿಂದ ತೊಂದರೆಗೀಡಾಗಿದ್ದರೆ ಈ ಮನೆಮದ್ದನ್ನು ಸೇವಿಸಿ

ಚರ್ಮವನ್ನು ಡಿಟಾಕ್ಸ್ ಮಾಡಲು ಉತ್ತಮವಾದ ಪೀಲ್ ಅಪ್ ಫೇಸ್ ಪ್ಯಾಕ್ ಗಳನ್ನು ಬಳಸಿ. ಹಾಗೇ ಚರ್ಮಕ್ಕೆ ಅನುಗುಣವಾಗಿ ಮುಖಕ್ಕೆ ರಿಫ್ರೆಶ್ ಫೇಶಿಯಲ್ ಮಾಡಿ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...