Kannada Duniya

ಮಗುವಿನ ಒಣತ್ವಚೆ ಸಮಸ್ಯೆಯನ್ನು ಹೋಗಲಾಡಿಸಲು ಈ ಮನೆಮದ್ದನ್ನು ಹಚ್ಚಿ….!

ಚಳಿಗಾಲದಲ್ಲಿ ಹೆಚ್ಚಿನ ಜನರು ಚರ್ಮದ ಸಮಸ್ಯೆಗೆ ಒಳಗಾಗುತ್ತಾರೆ. ಆದರೆ ಚಿಕ್ಕ ಮಕ್ಕಳ ತ್ವಚೆ ತುಂಬಾ ಸೂಕ್ಷ್ಮವಾಗಿರುವ ಕಾರಣ ಅವರು ಚಳಿಗಾಲದಲ್ಲಿ ಹಲವು ಚರ್ಮದ ಸಮಸ್ಯೆಗಳಿಗೆ ಒಳಗಾಗುತ್ತಾರೆ. ಹಾಗಾಗಿ ಚಳಿಗಾಲದಲ್ಲಿ ಮಕ್ಕಳ ಚರ್ಮ ತುಂಬಾ ಒಣಗುತ್ತಿದ್ದರೆ ಈ ಮನೆಮದ್ದನ್ನು ಹಚ್ಚಿ.

-ಮಗುವಿನ ಚರ್ಮ ಒಣಗದಂತೆ ತಡೆಯಲು ಅವರ ದೇಹವನ್ನು ಹೈಡ್ರೀಕರಿಸಿ. ಅವರ ದೇಹಕ್ಕೆ ಬೇಕಾದಷ್ಟು ನೀರನ್ನು ಕುಡಿಸಿ. ಅವರಲ್ಲಿ ನೀರಿನ ಕೊರತೆ ಕಾಡದಂತೆ ನೋಡಿಕೊಳ್ಳಿ. ಹಾಗಾಗಿ ಮಕ್ಕಳಿಗೆ ದಿನಕ್ಕೆ 5 ಕಪ್ ನೀರನ್ನು ಕುಡಿಸಿ.

-ಮಗುವಿನ ದೇಹಕ್ಕೆ ಬೆಣ್ಣೆ ಹಚ್ಚಿ ಮಸಾಜ್ ಮಾಡಿ. ಇದು ಚರ್ಮದ ಶುಷ್ಕತೆಯನ್ನು ಹೋಗಲಾಡಿಸುತ್ತದೆ. ಅಲ್ಲದೇ ಮಗುವವಿನ ಚರ್ಮ ಆರೋಗ್ಯವಾಗಿಡುತ್ತದೆ.

ತೂಕ ನಷ್ಟಕ್ಕೆ ಪ್ರತಿದಿನ 1 ಲವಂಗ ತಿನ್ನಿರಿ, ಇತರ ಪ್ರಯೋಜನಗಳನ್ನು ತಿಳಿಯಿರಿ….!

-ಮಗುವನ್ನು ಚಳಿಗಾಲದಲ್ಲಿ ಉಗುರುಬೆಚ್ಚಗಿರುವ ನೀರಿನಲ್ಲಿಯೇ ಸ್ನಾನ ಮಾಡಿಸಿ. ಇದು ಚರ್ಮವನ್ನು ತೇವಾಂಶದಿಂದ ಇಡುತ್ತದೆ. ಇದರಿಂದ ಚರ್ಮ ಒಣಗುವುದಿಲ್ಲ.

-ಹಾಗೇ ಚಳಿಗಾಲದಲ್ಲಿ ಮಕ್ಕಳನ್ನು ನೀರಿನಲ್ಲಿ ಹೆಚ್ಚು ಹೊತ್ತು ಇರದಂತೆ ನೋಡಿಕೊಳ್ಳಿ. ಇಲ್ಲವಾದರೆ ಇದರಿಂದ ತ್ವಚೆ ಒಣಗುತ್ತದೆ.

 


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...