Kannada Duniya

ನೀವು ಮಸ್ಕರಾವನ್ನು ಖರೀದಿಸುವಾಗ ಈ ವಿಷಯಗಳನ್ನು ನೆನಪಿನಲ್ಲಿಡಿ….!

ಕಣ್ಣಿನ ರೆಪ್ಪೆಗಳು ದಪ್ಪವಾಗಿದ್ದರೆ ನಿಮ್ಮ ಕಣ್ಣುಗಳು ಸುಂದರವಾಗಿ ಕಾಣುವುದರ ಜೊತೆಗೆ ನಿಮ್ಮ ಅಂದ ಹೆಚ್ಚಾಗುತ್ತದೆ. ಹಾಗಾಗಿ ಹಚ್ಚಿನವರು ಕಣ್ಣಿನ ರೆಪ್ಪೆಗಳಿಗೆ ಮಸ್ಕರಾವನ್ನು ಹಚ್ಚುತ್ತಾರೆ. ಆದರೆ ಈ ಮಸ್ಕರಾವನ್ನು ಖರೀದಿಸುವಾಗ ಈ ಸಲಹೆ ಪಾಲಿಸಿ. ಇಲ್ಲವಾದರೆ ಕಣ್ಣಿಗೆ ಹಾನಿಯಾಗಬಹುದು.

ಮಸ್ಕರಾವನ್ನು ಖರೀದಿಸುವಾಗ ಅದರ ಕುಂಚವನ್ನು ಮೊದಲು ನೋಡಿ. ಕುಂಚಗಳಲ್ಲಿ ಹಲವು ವಿಧಗಳಿವೆ. ನೀವು ರೆಪ್ಪೆಗೂದಲಿಗೆ ದಪ್ಪ ಆದ ನೋಟ ನೀಡುವಂತಹ ಮತ್ತು ಮೃದುವಾಗ ಬ್ರಷ್ ಅನ್ನು ಆಯ್ಕೆ ಮಾಡಿ.

ಕೆಲವು ಹುಡುಗಿಯರು ವಾಟರ್ ಪ್ರೂಫ್ ಮಸ್ಕರಾಗಳನ್ನು ಖರೀದಿಸುತ್ತಾರೆ. ಆದರೆ ಪ್ರತಿದಿನ ಕಣ್ಣಿನ ರೆಪ್ಪೆಗಳಿಗೆ ಮಸ್ಕರಾ ಬಳಸುವವರು ವಾಟರ್ ಪ್ರೂಫ್ ಮಸ್ಕರಾವನ್ನು ಖರೀದಿಸಬೇಡಿ. ಇದರಿಂದ ಕಣ್ಣಿಗೆ ಹಾನಿಯಾಗಬಹುದು.

ಮಸ್ಕರಾವನ್ನು ಖರೀದಿಸುವಾಗ ಅದರ ಎಕ್ಸಪರಿ ದಿನಾಂಕಗಳನ್ನು ಸರಿಯಾಗಿ ನೋಡಿ ಖರೀದಿಸಿ. ಯಾಕೆಂದರೆ ಹಳೆಯ ಮಸ್ಕರಾದಿಂದ ಕಣ್ಣಿಗೆ ಹಾನಿಯಾಬಹುದು. ಮತ್ತು ಯಾವುದೇ ಮಸ್ಕರಾಗಳನ್ನು 3 ತಿಂಗಳುಗಳಿಗಿಂತ ಹೆಚ್ಚು ಕಾಲ ಬಳಸಬಾರದು.

ಕಣ್ಣಿಗೆ ಹಾಕಿದ ಐಲೈನರ್ ಹದಗೆಡುತ್ತಿದ್ದರೆ ಈ ಟ್ರಿಕ್ ಗಳನ್ನು ಅನುಸರಿಸಿ

ಹುಡುಗಿಯರು ಹೆಚ್ಚಾಗಿ ಕಪ್ಪು ಬಣ್ಣದ ಮಸ್ಕರಾವನ್ನು ಖರೀದಿಸುತ್ತಾರೆ. ಆದರೆ ನಿಮ್ಮ ಸ್ಕೀನ್ ಗೆ ಅನುಗುಣವಾಗಿ ಮಸ್ಕರಾವನ್ನು ಆಯ್ಕೆ ಮಾಡಿ ನಿಮ್ಮ ಚರ್ಮ ಗಾಢವಾಗಿದ್ದರೆ ಕಪ್ಪು ಮಸ್ಕರಾ ಬಳಸಿ, ನಿಮ್ಮ ಚರ್ಮ ತಿಳಿಬಣ್ಣವಾಗಿದ್ದರೆ ಕಂದು ಬಣ್ಣ ದ ಮಸ್ಕರಾ ಬಳಸಿ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...