Kannada Duniya

ಕಣ್ಣಿಗೆ ಹಾಕಿದ ಐಲೈನರ್ ಹದಗೆಡುತ್ತಿದ್ದರೆ ಈ ಟ್ರಿಕ್ ಗಳನ್ನು ಅನುಸರಿಸಿ….!

ಅನೇಕ ಜನರಿಗೆ ಮೇಕಪ್ ಮಾಡವಾಗ ಕಷ್ಟದ ಕೆಲಸವೆಂದರೆ ಐಲೈನರ್ ಅನ್ನು ಅನ್ವಯಿಸುವುದು. ಇದು ಸ್ವಲ್ಪ ಹೆಚ್ಚು ಕಡಿಮೆಯಾದರೂ ಇಡೀ ಮುಖದ ಅಂದ ಕೆಡುತ್ತದೆ. ಹಾಗಾಗಿ ಕೆಲವು ಹುಡುಗಿಯರು ಐಲೈನರ್ ಅನ್ನು ಬಳಸುವುದಿಲ್ಲ. ಹಾಗಾಗಿ ಐಲೈನರ್ ಅನ್ನು ಹಚ್ಚುವಾಗ ಈ ಟ್ರಕ್ ಗಳನ್ನು ಬಳಸಿ.

ಕೆಲವರು ಕಣ್ಣಿಗೆ ಐಲೈನರ್ ಹಚ್ಚುವಾಗ ಮೇಲಿನಿಂದ ಹಚ್ಚುತ್ತಾರೆ. ಇದರಿಂದ ಅದರ ಆಕಾರದಲ್ಲಿ ಹೆಚ್ಚು ಕಡಿಮೆಯಾಗಿ ಆಕಾರ ಹಾಳಾಗುತ್ತದೆ. ಇದು ನಿಮ್ಮ ನೋಟವನ್ನು ಕೆಡಿಸುತ್ತದೆ.

ಕಣ್ಣಿಗೆ ವಿಂಗ್ಸ್ ಐಲೈನರ್ ತುಂಬಾ ಸುಂದರವಾಗಿ ಕಾಣುತ್ತದೆ. ಆದರೆ ಇದನ್ನು ಹಚ್ಚುವುದು ತುಂಬಾ ಕಷ್ಟದ ಕೆಲಸ. ಇದನ್ನು ತೆಳುವಾಗಿ ಅಥವಾ ದಪ್ಪವಾಗಿ ಹಚ್ಚಬಹುದು. ಆದರೆ ಇದನ್ನು ಹಚ್ಚುವಾಗ ಕೊನೆಯಲ್ಲಿ ಬಿಂದುವನ್ನು ಇಟ್ಟುಕೊಳ್ಳಿ. ಇದರಿಂದ ಅದು ಚೆನ್ನಾಗಿ ಬರುತ್ತದೆ.

ಮೊದಲಬಾರಿಗೆ ಐಲೈನರ್ ಹಚ್ಚುವವರು ಪೆನ್ಸಿಲ್ ಲೈನರ್ ಅನ್ನು ಬಳಸಿ. ಲಿಕ್ವಿಡ್ ಐಲೈನರ್ ಬಳಸಿದರೆ ಅದು ದಪ್ಪವಾಗಿ ತುಂಬಾ ಕೆಟ್ಟದಾಗಿ ಕಾಣುತ್ತದೆ.

ಕಣ್ಣುಗಳ ಆರೋಗ್ಯವನ್ನು ಹೆಚ್ಚಿಸಲು ಈ ಆಹಾರಗಳನ್ನು ಸೇವಿಸಿ

ಕೆಲವರು ಕಣ್ಣಿನ ಕೆಳಭಾಗಕ್ಕೂ ಕೂಡ ಐಲೈನರ್ ಹಚ್ಚುತ್ತಾರೆ. ಆದರೆ ಇದು ತಪ್ಪು ಕಣ್ಣಿನ ಕೆಳಗೆ ಕೇವಲ ಕಾಜಲ್ ಅನ್ನು ಮಾತ್ರ ಹಚ್ಚಬೇಕು. ಇದರಿಂದ ಕಣ್ಣು ಸುಂದರವಾಗಿ ಕಾಣುತ್ತದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...