Kannada Duniya

ನಿಮ್ಮ ತೋಳುಗಳು ದಪ್ಪವಾಗಿ ಕಾಣುವುದನ್ನು ತಪ್ಪಿಸಲು ಈ ಬ್ಲೌಸ್ ಗಳನ್ನು ಧರಿಸಿ….!

ಎಲ್ಲರೂ ಪಾರ್ಟಿ ಫಂಕ್ಷನ್ ಗಳಲ್ಲಿ ಸುಂದರವಾಗಿ ಕಾಣಲು ಬಯಸುತ್ತಾರೆ. ಅದಕ್ಕಾಗಿ ವಿವಿಧ ಶೈಲಿಯ ಉಡುಗೆಗಳನ್ನು ಧರಿಸುತ್ತಾರೆ. ಆದರೆ ಕೆಲವರಿಗೆ ತೋಳುಗಳಲ್ಲಿ ಕೊಬ್ಬು ಸಂಗ್ರಹವಾಗಿರುತ್ತದೆ. ಅಂತವರು ಕೆಲವು ಬ್ಲೌಸ್ ಗಳನ್ನು ಧರಿಸಿದಾಗ ಅಸಹ್ಯವಾಗಿ ಕಾಣುತ್ತದೆ. ಹಾಗಾಗಿ ನಿಮ್ಮ ತೋಳುಗಳು ದಪ್ಪವಾಗಿ ಕಾಣುವುದನ್ನು ತಪ್ಪಿಸಲು ಈ ಬ್ಲೌಸ್ ಗಳನ್ನು ಧರಿಸಿ.

 

ರಫಲ್ ಸ್ಲೀವ್ಸ್ : ಇತ್ತೀಚಿನ ದಿನಗಳಲ್ಲಿ ಇದು ಫ್ಯಾಷನ್ ಆಗಿದೆ. ಈ ಬ್ಲೌಸ್ ಅನೇಕ ವಿನ್ಯಾಸಗಳಲ್ಲಿ ಸಿಗುತ್ತದೆ. ಇದನ್ನು ಧರಿಸಿದರೆ ಇಮ್ಮ ತೋಳುಗಳು ಕಾಣಿಸುವುದಿಲ್ಲ.

 

ಮೊಣಕೈ ಉದ್ದದ ತೋಳುಗಳು : ಇಂತಹ ಬ್ಲೌಸ್ ಗಳು ಕೂಡ ನಿಮ್ಮ ತೋಳುಗಳ ಕೊಬ್ಬನ್ನು ಮರೆಮಾಚುತ್ತವೆ. ನೀವು ಸೀರೆ, ಲೆಹಂಗಾ ಅಥವಾ ಉದ್ದನೆಯ ಸ್ಕರ್ಟ್ ಗೆ ಈ ರೀತಿಯ ಬ್ಲೌಸ್ ಗಳನ್ನು ಧರಿಸಬಹುದು.

 

ಲಾಂಗ್ ಫುಲ್ ಸ್ಲೀವ್ಸ್ : ಇದು ನಿಮ್ಮ ತೋಳುಗಳನ್ನು ಸಂಪೂರ್ಣವಾಗಿ ಮುಚ್ಚುತ್ತದೆ. ಹಾಗಾಗಿ ಇದರಿಂದ ನಿಮ್ಮ ದಪ್ಪ ತೋಳುಗಳು ಕಾಣಿಸುವುದಿಲ್ಲ. ಇದು ಸ್ಟೈಲಿಶ್ ಆಗಿ ಕಾಣುತ್ತದೆ.

 

Yoga for Face fat: ಮುಖದ ಕೊಬ್ಬನ್ನು ಕಡಿಮೆ ಮಾಡಲು ಈ ಯೋಗಾಸನ ಅಭ್ಯಾಸ ಮಾಡಿ…!

ಪಫ್ ಸ್ಲೀವ್ ಗಳು : ಇದನ್ನು ಸೀರೆ ಮತ್ತು ಲೆಹಂಗಾಕ್ಕೆ ಧರಿಸಲಾಗುತ್ತದೆ. ಇದು ತುಂಬಾ ಆಕರ್ಷಕವಾದ ನೋಟವನ್ನು ನೀಡುತ್ತದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...