Kannada Duniya

ಚಹಾ ತಯಾರಿಸಿದ ಎಲೆಗಳನ್ನು ಬಳಸಿ ನಿಮ್ಮ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಿ…!

 

ಪ್ರತಿದಿನ ಪ್ರತಿಯೊಬ್ಬರ ಮನೆಯಲ್ಲಿ ಚಹಾವನ್ನು ತಯಾರಿಸುತ್ತಾರೆ. ಚಹಾ ತಯಾರಿಸಿದ ಮೇಲೆ ಅದರ ಎಲೆಗಳನ್ನು ಸೋಸಿ ಎಸೆಯುತ್ತಾರೆ. ಆದರೆ ಈ ಚಹಾ ಎಲೆಗಳನ್ನು ಬಳಸಿ ಕೆಲವು ನಿಮ್ಮ ಸೌಂದರ್ಯ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದಂತೆ. ಅದು ಹೇಗೆ ಎಂಬುದನ್ನು ತಿಳಿದುಕೊಳ್ಳಿ.

ಚರ್ಮದ ಕಲೆಗಳನ್ನು ಹೋಗಲಾಡಿಸಲು ಚಹಾದ ಎಲೆಗಳನ್ನು ಬಳಸಬಹುದಂತೆ. ಚಹಾದ ಎಲೆಗಳಿಗೆ ಅಕ್ಕಿ ಹಿಟ್ಟು ಮತ್ತು ಟೊಮೆಟೊ ರಸವನ್ನು ಬೆರೆಸಿ ಮುಖಕ್ಕೆ ಹಚ್ಚಿ. 20 ನಿಮಿಷ ಬಿಟ್ಟು ಮುಖವನ್ನು ತೊಳೆಯಿರಿ.

ಒಡೆದ ಹಿಮ್ಮಡಿಗಳನ್ನು ಸರಿಪಡಿಸಲು ಚಹಾದ ಎಲೆಗಳಿಗೆ 1 ಚಮಚ ಓಟ್ಸ್ ಮತ್ತು ಕೆಲವು ಹನಿ ತೆಂಗಿನೆಣ್ಣೆಗಳನ್ನು ಮಿಶ್ರಣ ಮಾಡಿ ನಿಮ್ಮ ಹಿಮ್ಮಡಿಗಳಿಗೆ ಹಚ್ಚಿ ಸ್ವಲ್ಪ ಸಮಯ ಬಿಟ್ಟು ಕಾಲುಗಳನ್ನು ಸ್ಕ್ರಬ್ ಮಾಡಿ ಬೆಚ್ಚಗಿರುವ ನೀರಿನಿಂದ ತೊಳೆಯಿರಿ.

ಮುಖಕ್ಕೆ ಫೌಂಡೇಶನ್ ಹಚ್ಚವಾಗ ಈ ನಿಯಮ ಪಾಲಿಸಿ….!

ಚಹಾದ ಎಲೆಗಳಿಂದ ಮೊಣಕೈ ಕಾಲುಗಳ ಕಪ್ಪು ಕಲೆಗಳನ್ನು ತೊಲಗಿಸಬಹುದಂತೆ. ಅದಕ್ಕಾಗಿ ಚಹಾದ ಎಲೆಗಳನ್ನು ಬಿಸಿಲಿನಲ್ಲಿ ಒಣಗಿಸಿ ನಂತರ ಒರಟಾಗಿ ರುಬ್ಬಿಕೊಂಡು ನಂತರ ಅದಕ್ಕೆ ಅಡುಗೆ ಸೋಡಾ, ನಿಂಬೆ ರಸವನ್ನು ಮಿಶ್ರಣ ಮಾಡಿ ಮೊಣಕೈ ಕಾಲಿಗೆ ಹಚ್ಚಿ.

 


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...