Kannada Duniya

ಕೂದಲಿನ ಸಮಸ್ಯೆಗಳನ್ನು ನಿವಾರಿಸಲು ಗೋರಂಟಿಯನ್ನು ಇದನ್ನು ಮಿಕ್ಸ್ ಮಾಡಿ ಹಚ್ಚಿ….!

ಕೆಲವರು ಉದ್ದವಾದ ಮತ್ತು ಬಲವಾದ ಕೂದಲನ್ನು ಹೊಂದಲು ಬಯಸುತ್ತಾರೆ. ಆದರೆ ಸರಿಯಾದ ಕೂದಲಿನ ಆರೈಕೆ ಮಾಡದ ಕಾರಣ ಕೂದಲು ನಿರ್ಜೀವವಾಗುತ್ತದೆ. ಅಲ್ಲದೇ ಒತ್ತಡದ ಜೀವನಶೈಲಿ, ಕೆಟ್ಟ ಆಹಾರ ಪದ್ಧತಿ ನಮ್ಮ ಕೂದಲಿನ ಮೇಲೆ ಹಾನಿಯನ್ನುಂಟು ಮಾಡುತ್ತದೆ. ಹಾಗಾಗಿ ಕೂದಲಿನ ಸಮಸ್ಯೆಗಳನ್ನು ನಿವಾರಿಸಲು ಗೋರಂಟಿಯನ್ನು ಇದನ್ನು ಮಿಕ್ಸ್ ಮಾಡಿ ಹಚ್ಚಿ.

ಕೂದಲು ಉದ್ದವಾಗಿ ದಪ್ಪವಾಗಿ, ಬಲವಾಗಿ ಬೆಳೆಯಲು ಗೋರಂಟಿ ಎಲೆಗಳನ್ನು ಪುಡಿ ಮಾಡಿ ಅದಕ್ಕೆ ಕೊಬ್ಬರಿ ಎಣ್ಣೆಯನ್ನು ಮಿಕ್ಸ್ ಮಾಡಿ ಕೂದಲಿಗೆ ಹಚ್ಚಿ ಒಂದು ಗಂಟೆ ಬಿಟ್ಟು ಕೂದಲನ್ನು ವಾಶ್ ಮಾಡಿ.

ಕೂದಲಿನಲ್ಲಿ ತಲೆಹೊಟ್ಟಿನ ಸಮಸ್ಯೆ ಇದ್ದರೆ ಇದರಿಂದ ನೆತ್ತಿಯಲ್ಲಿ ತುರಿಕೆ ಉಂಟಾಗಿ ಕೂದಲು ದುರ್ಬಲವಾಗುತ್ತದೆ. ಹಾಗಾಗಿ ಗೋರಂಟಿ ಪುಡಿಗೆ ಮೆಂತ್ಯಬೀಜಗಳನ್ನು ಸಾಸಿವೆ ಎಣ್ಣೆಯಲ್ಲಿ ಬೆರೆಸಿ ಪೇಸ್ಟ್ ತಯಾರಿಸಿ ಕೂದಲಿಗೆ ಹಚ್ಚಿ. ಅರ್ಧ ಗಂಟೆ ನಂತರ ಶಾಂಪೂ ಬಳಸಿ ತೊಳೆಯಿರಿ.

ಬಲವಾದ ಕೂದಲನ್ನು ಪಡೆಯಲು ಮನೆಯಲ್ಲಿಯೇ ಗ್ರೀನ್ ಶಾಂಪೂ ತಯಾರಿಸಿ ಬಳಸಿ

ನಿಮ್ಮ ಕೂದಲು ತುಂಬಾ ಉದುರುತ್ತಿದ್ದರೆ ಗೋರಂಟಿ ಪುಡಿಗೆ ಸಾಸಿವೆ ಎಣ್ಣೆಯನ್ನು ಬೆರೆಸಿ ಕೂದಲಿಗೆ ಹಚ್ಚಿ. ಅಥವಾ ಎಣ್ಣೆಯಲ್ಲಿ ಗೋರಂಟಿ ಎಲೆಗಳನ್ನು ಕಾಯಿಸಿ ಬಾಟಲಿನಲ್ಲಿ ಸ್ಟೋರ್ ಮಾಡಿಟ್ಟು, ವಾರದಲ್ಲಿ ಎರಡು ಬಾರಿ ಕೂದಲಿಗೆ ಹಚ್ಚಿ ಮಸಾಜ್ ಮಾಡಿ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...