Kannada Duniya

Gain Weight Safely:ದಪ್ಪಗಾಗುವುದು ಈಗ ಬಲು ಸುಲಭ

ಸಣ್ಣಗಾಗಬೇಕು ಎಂದು ಎಷ್ಟೋ ಮಂದಿ ಪ್ರಯತ್ನಿಸುವಷ್ಟೇ ದಪ್ಪಗಾಗಬೇಕು ಎಂದು ಪ್ರಯತ್ನಿಸುವವರು ಇದ್ದಾರೆ.ಇದಕ್ಕಾಗಿ ಹಲವು ಆಹಾರ ಪದ್ಧತಿಗಳನ್ನು ಅನುಸರಿಸುತ್ತಾರೆ. ಆದರೆ ಇದಕ್ಕೆಂದು ವಿಪರೀತ ಆಹಾರ ಸೇವನೆ ಮಾಡುವುದರಿಂದ ಆರೋಗ್ಯ ಹಾಳಾಗುವ ಸಂದರ್ಭವೇ ಹೆಚ್ಚು. ಹಾಗಿದ್ದರೆ ನಿಯಮಿತ ಆಹಾರ ಸೇವನೆಯ ಮೂಲಕ ದೇಹ ತೂಕವನ್ನು ಹೇಗೆ ಹೆಚ್ಚಿಸಿಕೊಳ್ಳಬಹುದು?

 

-ಒಣದ್ರಾಕ್ಷಿಯಲ್ಲಿ ಸಾಕಷ್ಟು ಪ್ರಮಾಣದ ಕ್ಯಾಲೋರಿ ಅಂಶಗಳಿವೆ. ಹಿಂದಿನ ರಾತ್ರಿ ನೀರಿನಲ್ಲಿ ನೆನೆ ಹಾಕಿದ ದ್ರಾಕ್ಷಿಯನ್ನು ಮರುದಿನ ಸೇವನೆ ಮಾಡುವುದರಿಂದ ಒಂದೇ ತಿಂಗಳಲ್ಲಿ ದೇಹದ ತೂಕವನ್ನು ಹೆಚ್ಚಿಸಿಕೊಳ್ಳಬಹುದು.

 

-ಪೀನಟ್ ಬಟರ್ ಸೇವನೆಯಿಂದಲೂ ಆರೋಗ್ಯಕಾರಿಯಾಗಿ ದೇಹ ತೂಕವನ್ನು ಹೆಚ್ಚಿಸಿಕೊಳ್ಳಬಹುದು. ಇದರಿಂದ ದೇಹದ ಮೇಲೆ ಯಾವುದೇ ಅಡ್ಡ ಪರಿಣಾಮಗಳು ಬೀರುವುದಿಲ್ಲ.

 

-ತರಕಾರಿಗಳಲ್ಲಿ ಆಲೂಗಡ್ಡೆ ನಿಮ್ಮ ಫೇವರಿಟ್ ಆಗಿದ್ದರೆ ನಿಯಮಿತವಾಗಿ ಅದನ್ನು ಸೇವಿಸಿ. ಇದರಿಂದ ದೇಹತೂಕ ಬಹುಬೇಗ ಹೆಚ್ಚುತ್ತದೆ.

 

‘ಏಲಕ್ಕಿ ನೀರು’ ಕುಡಿಯುವುದರಿಂದ ಆಗುವ ಪ್ರಯೋಜನವೇನು ಗೊತ್ತಾ?

-ಬಾಳೆಹಣ್ಣಿಗೆ ಹಾಲು ಬೆರೆಸಿ ಜ್ಯೂಸ್ ಮಾಡಿ ಕುಡಿಯುವುದರಿಂದ ಇಲ್ಲವೇ ಬಾಳೆಹಣ್ಣು ತಿಂದ ಬಳಿಕ ಒಂದು ಲೋಟ ಹಾಲು ಕುಡಿಯುವುದರಿಂದ ಸದೃಢ ದೇಹವನ್ನು ಹೊಂದಬಹುದು.

-ದೋಸೆ ಇಲ್ಲವೇ ಚಪಾತಿ ಮೇಲೆ ಸಕ್ಕರೆ ಹಾಗೂ ಬೆಣ್ಣೆ ಬೆರೆಸಿ ಸೇವನೆ ಮಾಡಿದರೆ ಆರೋಗ್ಯಕ್ಕೆ ಒಳ್ಳೆಯದು, ದೇಹದ ತೂಕವು ಬಹುಬೇಗ ಹೆಚ್ಚುತ್ತದೆ.

Gain Weight Fast and Safely


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...