Kannada Duniya

ಯೋನಿಯಲ್ಲಿ ವೀರ್ಯವು ಎಷ್ಟು ಕಾಲ ಜೀವಂತ ಇರುತ್ತದೆ ಎಂಬುದನ್ನು ತಿಳಿಯಿರಿ

ಮಕ್ಕಳನ್ನು ಪಡೆಯಲು ಬಯಸದ ದಂಪತಿಗಳು ಸುರಕ್ಷಿತ ಲೈಂಗಿಕತೆಯನ್ನು ಹೊಂದುತ್ತಾರೆ. ಆದರೆ ಕೆಲವೊಮ್ಮೆ ಅವರಿಗೆ ತಿಳಿಯದಂತೆ ಯೋನಿಯಲ್ಲಿ ವೀರ್ಯ ಹೋಗಿರುತ್ತದೆ. ಇದರಿಂದ ಅವರು ಗರ್ಭ ಧರಿಸುವ ಬಗ್ಗೆ ಚಿಂತೆಗೀಡಾಗುತ್ತಾರೆ. ಆದರೆ ನೀವು ಚಿಂತಿಸುವ ಮೊದಲು ಯೋನಿಯಲ್ಲಿ ವೀರ್ಯ ಎಷ್ಟು ದಿನ ಜೀವಂತವಿರುತ್ತದೆ? ನೀವು ಗರ್ಭಿಣೆಯಾಗುತ್ತೀರಾ? ಎಂಬ ಬಗ್ಗೆ ಸರಿಯಾದ ಮಾಹಿತಿ ತಿಳಿದುಕೊಳ್ಳಿ.

ಸಂಭೋಗದ ನಂತರ ವೀರ್ಯ ಯೋನಿಯೊಳಗೆ ಹೋದ ಮಾತ್ರಕ್ಕೆ ಗರ್ಭ ಧರಿಸುವುದಿಲ್ಲ. ಆದರೆ ಹೋದ ವೀರ್ಯ ಮೊಟ್ಟೆಯನ್ನು ಫಲವತ್ತಾಗಿಸುತ್ತದೆಯೇ? ಎಂಬುದು ಮುಖ್ಯವಾಗುತ್ತದೆ. ಯಾಕೆಂದರೆ 1 ಚಮಚ ವೀರ್ಯದಲ್ಲಿ ಸುಮಾರು 100-600 ಕೋಟಿ ವೀರ್ಯಾಣು ಇರುತ್ತದೆಯಂತೆ. ಇದರಲ್ಲಿ 10-20 ಮಾತ್ರ ಮೊಟ್ಟೆಯನ್ನು ತಲುಪಲು ಸಾಧ್ಯ. ಯಾಕೆಂದರೆ ಯೋನಿಯೊಳಗೆ ಹೋದ ವೀರ್ಯಾಣುಗಳಿಗೆ ಎಲ್ಲಿಗೆ ಹೋಗಬೇಕು ಎಂಬುದು ತಿಳಿದಿರುವುದಿಲ್ಲ. ಆದರೆ ಮೊಟ್ಟೆಯು ರಾಸಾಯನಿಕ ಸಂಕೇತ ನೀಡುವುದರಿಂದ ಅದನ್ನು ಗ್ರಹಿಸಿ ವೀರ್ಯಾಣು ಮೊಟ್ಟೆಯ ಕಡೆಗೆ ಸಾಗುತ್ತದೆ.

ಆದರೆ ಗರ್ಭ ಧರಿಸಲು ವೀರ್ಯದ ಚಲನೆ, ಸಾಮರ್ಥ್ಯ ಕೂಡ ಮುಖ್ಯವಾಗುತ್ತದೆ. ಯಾಕೆಂದರೆ ಯೋನಿಯಲ್ಲಿ ವೀರ್ಯಾಣು 3-4 ದಿನಗಳ ಕಾಲ ಜೀವಂತವಿರುತ್ತದೆಯಂತೆ. ಇಂತಹ ಸಂದರ್ಭದಲ್ಲಿ ಮೊಟ್ಟೆಯ ಸಂಕೇತವನ್ನು ಗ್ರಹಿಸಿದ ವೀರ್ಯ 3-4 ದಿನಗಳೊಳಗೆ ಮೊಟ್ಟೆಯನ್ನು ತಲುಪದಿದ್ದರೆ ಅದು ಸಾಯುತ್ತದೆ. ಮತ್ತು ಅದು ತಲುಪಿದರೂ ಮೊಟ್ಟೆಯನ್ನು ಪ್ರವೇಶಿಸುವ ಸಾಮರ್ಥ್ಯ ಇಲ್ಲದಿದ್ದರೆ ಅದರಿಂದ ಗರ್ಭ ಧರಿಸಲು ಸಾಧ್ಯವಿಲ್ಲ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...